ಕಣಜ ಹುಳುಗಳ ದಾಳಿ

ಕಾಸರಗೋಡು: ರಾಜಪುರ ಒಡೆಯಂ ಚಾಲ್ ನಾಕಯದಲ್ಲಿ ನಿನ್ನೆ ಮಧ್ಯಾಹ್ನ ಕಣಜದ ಹುಳುಗಳ ದಾಳಿಯಿಂದ ವಿದ್ಯಾರ್ಥಿ ಸೇರಿದಂತೆ ಹಲವರು ಗಾಯಗೊಂಡಿದ್ದಾರೆ. ಅಟ್ಟೆಯಂಗಾನ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಅಲನ್ ಜೇಕಬ್ (೧೨), ನಾಕಯದ ಚಂದ್ರನ್ (೫೩), ಸಬೀನ್ (೪೦) ಎಂಬವರು ಕಣಜದ ಹುಳುಗಳ ದಾಳಿಗೊಳಗಾಗಿದ್ದು, ಅವರನ್ನು ಪೂಡಂಕಲ್ಲು ಸರಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಇದರ ಹೊರತಾಗಿ ಇತರ ಹಲವರ ಮೇಲೂ ಕಣಜದ ಹುಳುಗಳು ದಾಳಿ ನಡೆಸಿವೆ. ನಾಕಯ ಬಸ್ ತಂಗುದಾಣದ ಬಳಿ ಕಣಜದ ಹುಳುಗಳು ನಿನ್ನೆ ಮಧ್ಯಾಹ್ನ ದಾಳಿ ನಡೆಸಿವೆ. ಆಗ ಅಲ್ಲಿದ್ದ ಮಕ್ಕಳು ಬೊಬ್ಬೆ ಹಾಕಿದಾಗ ಮಕ್ಕಳ ರಕ್ಷಣೆಗಾಗಿ ಪಕ್ಕದ ಮನೆಯವರು ಮತ್ತು ದಾರಿ ಹೋಕರು ಅಲ್ಲಿಗೆ ಬಂದಾಗ ಅವರ ಮೇಲೂ ದಾಳಿ ನಡೆಸಿವೆ.

You cannot copy contents of this page