ಕಣ್ಣೂರು ವಿ.ವಿ. ಕಾಸರಗೋಡು ಕ್ಯಾಂಪಸ್ನಿಂದ ಕೋರ್ಸ್ ಬದಲಾವಣೆಗೆ ಯತ್ನ: ಎಸ್ಎಫ್ಐ ಮಾರ್ಚ್
ಕಾಸರಗೋಡು: ಕಣ್ಣೂರು ವಿ.ವಿ.ಯ ಕಾಸರಗೋಡು ಕ್ಯಾಂಪಸ್ನಿಂದ ಕೋರ್ಸ್ಗಳನ್ನು ಬದಲಿಸಲಿರುವ ಯತ್ನದ ವಿರುದ್ಧ ಪ್ರತಿಭಟನೆ ತೀವ್ರಗೊಂಡಿದೆ. ಎಸ್ಎಫ್ಐ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಕ್ಯಾಂಪಸ್ಗೆ ನಿನ್ನೆ ಮಾರ್ಚ್ ನಡೆಸಲಾಗಿದೆ. ಪೊಲೀಸರು ಮಾರ್ಚ್ ತಡೆದಾಗ ಅಲ್ಪ ಹೊತ್ತು ಘರ್ಷಣೆ ಸೃಷ್ಟಿಯಾಗಿತ್ತು.
ಎಸ್ಎಫ್ಐ ಜಿಲ್ಲಾ ಜೊತೆ ಕಾರ್ಯದರ್ಶಿ ಇಮ್ಮಾನುವಲ್ ಪಳ್ಳಿಕೆರೆ ಮಾರ್ಚ್ ಉದ್ಘಾಟಿಸಿದರು. ಜಿಲ್ಲಾ ಉಪಾಧ್ಯಕ್ಷ ಅಧಿನಾಂ ಚಟ್ಟಂಚಾಲ್ ಅಧ್ಯಕ್ಷತೆ ವಹಿಸಿದರು. ಏರಿಯಾ ಕಾರ್ಯದರ್ಶಿ ಅನುರಾಜ್ ಮಾತನಾಡಿದರು. ಅಲನ್ಸ್ ಪೆರಿಯ, ಅಜಿತ್ ಎಳೇರಿ, ಶ್ರೀಹರಿ, ಅನಿರುದ್ದನ್ ನೇತೃತ್ವ ನೀಡಿದರು.