ಕರಂದಕ್ಕಾಡ್- ರೈಲು ನಿಲ್ದಾಣ ತನಕದ ರಸ್ತೆ ನವೀಕರಣ ಕೆಲಸ ಆರಂಭ: ಭಾರೀ ಟ್ರಾಫಿಕ್ ಜಾಮ್

ಕಾಸರಗೋಡು: ನಗರದ ಕರಂದ ಕ್ಕಾಡ್‌ನಿಂದ ರೈಲು ನಿಲ್ದಾಣ ಕ್ಲೋಕ್ ಟವರ್ ತನಕದ ರಸ್ತೆಯ ನವೀಕರಣ ಕೆಲಸ ನಿನ್ನೆ ಮಧ್ಯಾಹ್ನದ ಬಳಿಕ ಆರಂಭಗೊಂಡಿದೆ. ಆದರೆ ಕಾಮಗಾರಿ ಯಾವಾಗ ಪೂರ್ಣಗೊಳ್ಳಲಿದೆ ಎಂಬು ದನ್ನು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ತಿಳಿಸಿಲ್ಲ. ನವೀಕರಣ ಕೆಲಸ ಪೂರ್ಣಗೊಂಡ ಬಳಿಕವಷ್ಟೇ ಈ ರಸ್ತೆಯನ್ನು ಸಾರಿಗೆ ಸಂಚಾರಕ್ಕಾಗಿ  ಪೂರ್ಣವಾಗಿ ಬಿಟ್ಟುಕೊಡಲಾಗು ವುದೆಂದು ಎಕ್ಸಿಕ್ಯೂಟಿವ್ ಇಂಜಿನಿಯರ್ ತಿಳಿಸಿದ್ದಾರೆ.

ನವೀಕರಣ ಕೆಲಸದಿಂದಾಗಿ ರಸ್ತೆಯ ಒಂದು ಬದಿಯ ನಿರ್ಮಾಣ ಕೆಲಸ ಈಗ ನಡೆಯುತ್ತಿದೆ. ಇನ್ನೊಂದು ಬದಿಯಲ್ಲಿ ಕರಂದಕ್ಕಾಡಿನತ್ತ  ಬರುವ ವಾಹನಗಳನ್ನು ಈಗ ಸಾಗಿಬಿಡಲಾಗುತ್ತಿದೆ. ಇದರಿಂದಾಗಿ ಇಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗತೊಡಗಿದೆ. ನವೀಕರಣ ಕೆಲಸ ಒಂದೆಡೆ ನಡೆಯುತ್ತಿರುವಂತೆಯೇ ನಿನ್ನೆ ರಾತ್ರಿ ನಗರದಲ್ಲಿ ಮಳೆ ಸುರಿದಿದ್ದು, ಅದು ನವೀಕರಣ ಕೆಲಸದ ಮೇಲೆ ಪರಿಣಾಮ ಬೀರಿದೆ. ಈ ಕೆಲಸ ಪೂರ್ಣಗೊಳ್ಳುವ ತನಕ ಜನರು ನಮ್ಮೊಂದಿಗೆ ಸಹಕರಿಸಬೇಕೆಂದು ಲೋಕೋಪಯೋಗಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ವಿನಂತಿಸಿಕೊಂಡಿದ್ದಾರೆ.

RELATED NEWS

You cannot copy contents of this page