ಕರ್ನಾಟಕ ಮದ್ಯ ವಶ

ಕಾಸರಗೋಡು: ಕಾಸರಗೋಡು ಅಬಕಾರಿ ರೇಂಜ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ನೇತೃತ್ವದ ಅಬಕಾರಿ ತಂಡ ನೆಲ್ಲಿಕುಂಜೆ ಬಂಗರಗುಡ್ಡೆ ರೈಲು ಹಳಿ ಬಳಿ ನಿನ್ನೆ ನಡೆಸಿದ ಕಾರ್ಯಾಚರಣೆ ಯಲ್ಲಿ ಕರ್ನಾಟಕ ನಿರ್ಮಿತ ೮.೬೪ ಲೀಟರ್ ಮದ್ಯ (೧೮೦ ಎಂಎಲ್‌ನ ೪೫ ಪ್ಯಾಕೆಟ್) ವಶಪಡಿಸಿಕೊಂಡಿದೆ. ಈ ಸಂಬಂಧ ಬಂಗರಗುಡ್ಡೆಯ ಉಮೇಶ್ ನಾಯ್ಕ (೩೫) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ ಆರೋಪಿ ತಲೆಮರೆಸಿಕೊಂಡಿರುವುದಾಗಿ ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ಅಬಕಾರಿ ಕಾರ್ಯಾಚರಣೆ ಯಲ್ಲಿ ಅಬಕಾರಿ ಪ್ರಿವೆಂಟೀವ್ ಆಫೀಸರ್ ರಂಜಿತ್, ಸಿಇಒಗಳಾದ ಐ.ಬಿ. ಪಿ.ಬಿ. ಬಿಜೊ ಇ.ಕೆ. ಎಂಬವರು ಒಳಗೊಂಡಿದ್ದರು.

RELATED NEWS

You cannot copy contents of this page