ಕಾಪಾ ಪ್ರಕರಣದಲ್ಲಿ ಸೆರೆಯಾಗಿ ಬಿಡುಗಡೆಗೊಂಡಿದ್ದ ಆರೋಪಿ ಮತ್ತೆ ಜೈಲಿಗೆ

ಕಾಸರಗೋಡು: ಕಾಪಾ ಪ್ರಕರಣದಲ್ಲಿ ಸೆರೆಯಾಗಿ ಇತ್ತೀಚೆಗೆ ಜಾಮೀನಿನಲ್ಲಿ ಹೊರಗಿಳಿದ ಯುವಕ ಮತ್ತೆ ಸೆರೆಯಾಗಿದ್ದಾನೆ. ಮಾವುಂಗಲ್ ಕಲ್ಯಾಣ್ ರಸ್ತೆಯ ಸುಧೀಶ್ (30)ನನ್ನು ಹೊಸದುರ್ಗ ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್ ಹಾಗೂ ತಂಡ ಬಂಧಿಸಿದೆ. ಕಳವು, ಅಕ್ರಮ ಮೊದಲಾದ ಹಲವಾರು ಪ್ರಕರಣಗಳಲ್ಲಿ ಆರೋಪಿಯೆಂದು ಪೊಲೀಸರು ತಿಳಿಸಿದ್ದಾರೆ. ಕೆಲವು ತಿಂಗಳ ಹಿಂದೆ ಸುಧೀಶ್‌ನನ್ನು ಕಾಪಾ ಪ್ರಕg ಣದಲ್ಲಿ ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು. ಬಳಿಕ ಹೈಕೋರ್ಟ್‌ನಿಂದ ಜಾಮೀನು ಲಭಿಸಿ ಹೊರಗಿಳಿದಿದ್ದನು. ಇತ್ತೀಚೆಗೆ ಕಾಞಂಗಾಡ್ ಅಲಾಮಿಪಳ್ಳಿ ಸಮೀಪದ ಬಾರ್‌ನಲ್ಲಿ ಸಂಭವಿಸಿದ ಘರ್ಷಣೆಯಲ್ಲಿ ಓರ್ವ ಯುವಕ ಗಂಭೀರ ಗಾಯಗೊಂಡಿದ್ದನು. ಈ ಪ್ರಕರಣದಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ಸುಧೀಶ್‌ನನ್ನು ಮತ್ತೆ ಸೆರೆ ಹಿಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page