ಕಾರಿನಿಂದ 6ಲಕ್ಷ ರೂ. ಎಗರಿಸಿದ ಬಗ್ಗೆ ದೂರು: ಪ್ರಕರಣ ದಾಖಲು

ಕಾಸರಗೋಡು:  ರಸ್ತೆ ಬದಿ ನಿಲ್ಲಿಸಿದ್ದ ಕಾರಿನಿಂದ ಆರು ಲಕ್ಷ ರೂ. ಎಗರಿಸಿದ ಬಗ್ಗೆ ಕಾಸರಗೋಡು ಪೊಲೀಸರಿಗೆ ದೂರು ನೀಡಲಾಗಿದೆ.

ಉಪ್ಪಳ ಕುರ್ಚಿಪಳ್ಳದ ಮೊಹಮ್ಮದ್ ಎಂಬವರು ಈ ಬಗ್ಗೆ ದೂರು ನೀಡಿದ್ದು, ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಮೊಹಮ್ಮದ್ ನಿನ್ನೆ ಬೆಳಿಗ್ಗೆ ಕಾರಿನಲ್ಲಿ ಕಾಸರಗೋಡು ಮಲ್ಲಿ ಕಾರ್ಜುನ ಕ್ಷೇತ್ರದ ಹಿಂದು ಗಡೆ  ಬಂದು ಅಲ್ಲಿ  ಓರ್ವ ನೊಂದಿಗೆ  ಮಾತನಾಡುತ್ತಿದ್ದ ವೇಳೆ ಕಾರಿನ ಹಿಂದುಗಡೆ ಆಸನದಲ್ಲಿ  ಇರಿಸಲಾಗಿದ್ದ ಹಣವನ್ನು   ಅಲ್ಲಿಂದ  ಇಬ್ಬರು ತೆಗೆದು ಸಾಗಿಸಿರು ವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಇದರಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page