ಕಾರುಗಳು ಮುಖಾಮುಖಿ: ಯುವಕ ಮೃತ್ಯು; ನಾಲ್ಕು ಮಂದಿಗೆ ಗಾಯ

ಕಾಸರಗೋಡು: ಕಾಸರಗೋಡು-ಕಾಞಂಗಾಡ್ ಕೆಎಸ್‌ಟಿಪಿ ರಸ್ತೆಯಲ್ಲಿ  ಇಂದು ಮುಂಜಾನೆ ಸಂಭವಿಸಿದ ವಾಹನ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದಾರೆ. ನಾಲ್ಕು ಮಂದಿ ಗಾಯ ಗೊಂಡಿದ್ದಾರೆ.  ಗಾಯ ಗೊಂಡವರಲ್ಲಿ  ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಉಳಿದ ಇಬ್ಬರನ್ನು ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲ್ಲಿ ದಾಖಲಿಸಲಾಗಿದೆ. ಬೇಕಲ ಮಲಾಂಕುನ್ನು ತಲ್ಲಾಣಿ ನಿವಾಸಿ ಅಶೋಕ್‌ರ  ಪುತ್ರ ಎ. ಅನಂತು (26) ಮೃತಪಟ್ಟವರು.  ಪ್ರಣವ್ (26), ಅಕ್ಷಯ್ (26) ಎಂಬಿವರನ್ನು ಮಂಗಳೂರಿನ ಆಸ್ಪತ್ರೆಯಲ್ಲೂ, ಸೌರವ್ (26), ಅಶ್ವಿನ್ (25) ಎಂಬಿವರನ್ನು ನುಳ್ಳಿಪ್ಪಾಡಿ ಆಸ್ಪತ್ರೆಯಲ್ಲೂ ದಾಖಲಿ ಸಲಾಗಿದೆ. ಕಾಸರಗೋಡಿನಿಂದ ಕಾಞಂಗಾಡ್ ಭಾಗಕ್ಕೆ ತೆರಳುತ್ತಿದ್ದ ಆಲ್ಟೋ ಕಾರು ಹಾಗೂ ಕಾಞಂಗಾಡ್ ನಿಂದ ಕಾಸರಗೋಡಿನತ್ತ ಆಗಮಿಸುತ್ತಿದ್ದ ಇನ್ನೋವಾ ಕಾರು ಮುಖಾಮುಖಿ ಯಾಗಿ ಅಪಘಾತ ಸಂಭವಿಸಿದೆ. ಕೆಳಗಿನ ಕಳನಾಡು ಬಸ್ ನಿಲ್ದಾಣ ಸಮೀಪ ಇಂದು ಮುಂಜಾನೆ ಅಪಘಾತ ಸಂಭವಿಸಿದೆ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆ ಶವಾಗಾರದ ಲ್ಲಿರಿಸಲಾಗಿದೆ. ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿದ್ದಾರೆ.

ಮೃತ ಯುವಕ ತಂದೆ, ತಾಯಿ ಲತಾ, ಸಹೋದರ ಅನೀಶ್, ಸಹೋದರಿ ಜಯಶ್ರೀ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

RELATED NEWS

You cannot copy contents of this page