ಕುಂಜತ್ತೂರು ಪ್ರೌಢಶಾಲೆಯ ಪೂರ್ವ ವಿದ್ಯಾರ್ಥಿಗಳ ಸ್ನೇಹಸಂಗಮ, ಗುರುವಂದನೆ

ಮಂಜೇಶ್ವರ: ಕುಂಜತ್ತೂರು ಪ್ರೌಢ ಶಾಲೆಯ 1992-93 ನೇ ಶೈಕ್ಷಣಿಕ ವರ್ಷದ ಹಳೆ ವಿದ್ಯಾರ್ಥಿ ಗಳ ಗುರು ವಂದನಾ ಹಾಗೂ ಸ್ನೇಹ ಸಂಗಮ ನಿನ್ನೆ ಯಶಸ್ವಿಯಾಗಿ ನಡೆ ಯಿತು. ಶಾಲಾ ಹಳೆ ವಿದ್ಯಾರ್ಥಿ ಹಾಗೂ ಕಾಸರಗೋಡು ಸರಕಾರಿ ಕಾಲೇಜಿನ ಅಸಿಸ್ಟಂಟ್ ಪ್ರೊ. ಸುಜಾತ ಎಸ್.ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭವನ್ನು ಶಾಲಾ ಮುಖ್ಯೋ ಪಾಧ್ಯಾಯ ಬಾಲಕೃಷ್ಣ ಜಿ. ದೀಪ ಬೆಳಗಿಸಿ ಉದ್ಘಾಟಿಸಿದರು. ಶಾಲಾ ಹಳೆ ವಿದ್ಯಾರ್ಥಿ ಹಾಗೂ ಉದ್ಯಮಿ ಎಂ ಪಿ ಇಸ್ಮಾಯಿಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಡಾ.ಮನ್ಸೂರ್ ಹಾಗೂ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಹ್ಮಾನ್ ಉದ್ಯಾವರ ಉಪÀಸ್ಥಿತರಿದ್ದರು. ಈಶ್ವರ ಮಾಸ್ಟರ್, ಸರಸ್ವತಿ ಟೀಚರ್, ಆನಂದ ಮಾಸ್ಟರ್, ಪ್ರಸನ್ನ ಟೀಚರ್, ಅನಿತಾ ಟೀಚರ್, ಶಿಶುಪಾಲನ್, ವಾರ್ಡ್ ಪ್ರತಿನಿದಿs ರಾಜೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಬಳಿಕ ನಿವೃತ್ತ ಅಧ್ಯಾಪಕ ಈಶ್ವರ ಮಾಸ್ಟರ್ ಯೋಗದಿಂದ ಆರೋಗ್ಯ ವನ್ನು ಕಾಪಾಡಿಕೊಳ್ಳುವ ಹಾಗೂ ವೈದ್ಯ ರಿಂದ ದೂರವಿರುವ ಬಗ್ಗೆ ವಿವರಿಸಿ ದರು. ಅಧ್ಯಾಪಕರು ಗಳನ್ನು ಹಾಗೂ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿ ಕೊಂಡವರನ್ನು ಸನ್ಮಾನಿಸ ಲಾಯಿತು. ಖಲೀಲ್ ಬಜಾಲ್ ಸ್ವಾಗತಿಸಿ, ಹರಿಣಾಕ್ಷಿ ವಂದಿಸಿದರು.

RELATED NEWS

You cannot copy contents of this page