ಕುಂಬಳೆ ಶಾಲೆ ವಿದ್ಯಾರ್ಥಿಗಳ ಮಧ್ಯೆ ಮತ್ತೆ ಘರ್ಷಣೆ

ಕುಂಬಳೆ: ಕುಂಬಳೆ   ಜಿಎಚ್‌ಎಸ್‌ಎಸ್‌ನ  ವಿದ್ಯಾರ್ಥಿಗಳ ಮಧ್ಯೆ ನಿನ್ನೆ ಮತ್ತೆ ಘರ್ಷಣೆ ನಡೆದಿರುವುದಾಗಿ   ದೂರಲಾಗಿದೆ. ನಿನ್ನೆ ಸಂಜೆ ಶಾಲೆಬಿಟ್ಟ ಬಳಿಕ ಮನೆಗೆ ತೆರಳುತ್ತಿದ್ದ ೯ನೇತರಗತಿ ವಿದ್ಯಾರ್ಥಿಯನ್ನು ಹತ್ತನೇ ತರಗತಿ ವಿದ್ಯಾರ್ಥಿಗಳು ತಡೆದು ನಿಲ್ಲಿಸಿ ಹಲ್ಲೆಗೈದಿರುವುದಾಗಿ ದೂರಲಾಗಿದೆ. ಈ ಸಂಬಂಧ 14 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಸ್‌ಬಿಆರ್ ವರದಿ ಸಲ್ಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗಷ್ಟೇ ಇದೇ ಶಾಲೆಯ 10ನೇ ತರಗತಿ ಹಾಗೂ ಪ್ಲಸ್‌ವನ್ ವಿದ್ಯಾರ್ಥಿಗಳ ಮಧ್ಯೆ ಹೊಡೆದಾಟ ನಡೆದಿತ್ತು.

Leave a Reply

Your email address will not be published. Required fields are marked *

You cannot copy content of this page