ಕುತ್ತಿ ತೆಗೆಯುವ ಕಾರ್ಯಕ್ರಮದ ಬೆನ್ನಲ್ಲೇ ವಾಸ್ತು ತಜ್ಞ ಕುಸಿದುಬಿದ್ದು ಮೃತ್ಯು

ಕಾಸರಗೋಡು:  ಮನೆ ನಿರ್ಮಾಣಕ್ಕಾಗಿ ಸ್ಥಾಪಿಸಿದ್ದ ಕತ್ತಿಯನ್ನು ತೆಗೆಯುವ ಕಾರ್ಯಕ್ರಮ ನಡೆದ ಅಲ್ಪ ಹೊತ್ತಿನಲ್ಲಿ ವಾಸ್ತುತಜ್ಞ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಪಳ್ಳಿಪುರ ಕೂಟಕ್ಕನಿಯ ಎ. ರವೀಂದ್ರನ್ (ಸೃಷ್ಟಿರವಿ ೫೪) ಎಂಬವರು ಮೃತಪಟ್ಟ ವ್ಯಕ್ತಿ. ಕಳೆದ ದಿನ ಪೂಚಕ್ಕಾಡ್‌ನಲ್ಲಿ ಘಟನೆ ನಡೆದಿದೆ.  ಹೊಸತಾಗಿ   ನಿರ್ಮಿಸಿದ ಮನೆಯ ಗೃಹ ಪ್ರವೇಶದ ಪೂರ್ವಭಾವಿಯಾಗಿ ನಡೆದ ಕುತ್ತಿ ತೆಗೆಯುವ ಕಾರ್ಯಕ್ರಮ ನಡೆದ ಅಲ್ಪ ಹೊತ್ತಿನಲ್ಲೇ ಅವರು ಕುಸಿದು ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

 ಹಲವು ಕ್ಷೇತ್ರಗಳು, ಭಜನಾ ಮಂದಿರ, ಮಡಪ್ಪುರಗಳ ನಿರ್ಮಾಣ ಹೊಣೆಗಾರಿಕೆಯನ್ನು  ಇವರು ವಹಿಸಿಕೊಂಡಿದ್ದರು.  ರವೀಂದ್ರನ್  ಖ್ಯಾತ ಚಿತ್ರಕಲಾವಿದರೂ ಆಗಿದ್ದರು.

ದಿ| ವೆಳುತ್ತಂಬು ಆಚಾರಿ-ಮಾಣಿ ದಂಪತಿಯ ಪುತ್ರನಾದ ಮೃತರು ಪತ್ನಿ ವಿನೋದಿನಿ, ಪುತ್ರಿ ನಿರಂಜನ (ಯು.ಕೆ), ಸಹೋದರ-ಸಹೋದರಿಯರಾದ ಮಾಧವಿ, ರೋಹಿಣಿ, ಕಾರ್ತ್ಯಾಯಿನಿ, ಕುಂಞಿರಾಮನ್, ನಾರಾಯಣಿ, ನಾರಾಯಣನ್, ಸುಶೀಲ, ಪೀತಾಂಬರನ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page