ಕುರುಡಪದವು ರಸ್ತೆ ಶೋಚನೀಯ: ಸ್ಥಳೀಯರಿಂದ ತಾತ್ಕಾಲಿಕ ದುರಸ್ತಿ

ಪೈವಳಿಕೆ: ಲಾಲ್ಭಾಗ್- ಕುರುಡ ಪದವು ರಸ್ತೆ ಶೋಚನೀಯಗೊಂಡು ಸಂಚಾರ ಅಸಾಧ್ಯವಾಗಿದ್ದರೂ ದುರಸ್ತಿ ಗೊಳಿಸಲು ಅಧಿಕಾರಿಗಳು ಶ್ರಮವಹಿಸದ ಹಿನ್ನೆಲೆಯಲ್ಲಿ ಸ್ಥಳೀಯರು ರಸ್ತೆಯ ಹೊಂಡಗಳನ್ನು  ದುರಸ್ತಿಗೊಳಿಸಲು ರಸ್ತೆಯ ಕಂಡಿಗೆ ಎಂಬಲ್ಲಿ ಇರುವ ಹೊಂಡಗಳಿಗೆ ಟಿಪ್ಪರ್ ಲಾರಿ ಚಾಲಕರು ಜಲ್ಲಿ ಹುಡಿಯನ್ನು ತಂದುಹಾಕಿದ್ದು, ಅಮ್ಮೇರಿ ಎಂಬಲ್ಲಿ ಹೊಂಡದಲ್ಲಿ ಕಟ್ಟಿ ನಿಲ್ಲುತ್ತಿದ್ದ ನೀರನ್ನು ಚರಂಡಿಗೆ ಹರಿದುಹೋಗಲು ಸ್ಥಳೀಯ ಯುವಕರು ವ್ಯವಸ್ಥೆ ಮಾಡಿದ್ದಾರೆ. ಶ್ರಮದಾನದ ಮೂಲಕ ಯುವಕರು ಈ ಕಾರ್ಯ ನಡೆಸಿದ್ದು, ಶೀಘ್ರ ರಸ್ತೆ ದುರಸ್ತಿಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

RELATED NEWS

You cannot copy contents of this page