ಕುಳದಪಾರೆಯಲ್ಲಿ ಒತ್ತೆಕೋಲ 21, 22ರಂದು


ಮುಳ್ಳೇರಿಯ: ಕುಳದಪಾರೆಯಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಈತಿಂಗಳ 21,22ರಂದು ನಡೆಯಲಿದೆ. 21ರಂದು ರಾತ್ರಿ 7ಕ್ಕೆ ಕುಳದ ದೈವಸ್ಥಾನದಿಂದ ಕುಳದಪಾರೆಗೆ ಭಂಡಾರ ಹೊರಡುವುದು, 8ಕ್ಕೆ ಮೇಲೇರಿಗೆ ಅಗ್ನಿಸ್ಪರ್ಶ, 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಚಾಟ, 22ರಂದು ಮುಂಜಾನೆ 5ಕ್ಕೆ ವಿಷ್ಣು ಮೂರ್ತಿ ದೈವದ ಅಗ್ನಿಸೇವೆ, 7ರಿಂದ ಪ್ರಸಾದ ಸ್ವೀಕಾರ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ 21ರಂದು ರಾತ್ರಿ 8.30ಕ್ಕೆ ಕುಳದಪಾರೆ ಅಂಗನವಾಡಿ ಮಕ್ಕ ಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಸ್ತಿ ಫ್ರೆಂಡ್ಸ್ ಅವರಿಂದ ಕೈಕೊಟ್ಟಿಕ್ಕಳಿ, ಆದೂರು ಪಂ ಚಲಿಂಗೇಶ್ವರ ಮಾತೃ ಸಮಿತಿಯವರಿಂದ ಮೆಗಾ ತಿರುವಾ ದಿರ, ಊರವರಿಂದ ನೃತ್ಯ ವೈವಿಧ್ಯ, 1.30ರಿಂದ ಅಭಿನಯ ಕಲಾ ತಂಡ ಕಾಸರಗೋಡು ಅವರಿಂದ ತುಳು ನಾಟಕ ‘ಅಣ್ಣೆ ಬರುವೆನಾ’ ಪ್ರದರ್ಶನಗೊಳ್ಳಲಿದೆ.

You cannot copy contents of this page