ಕೂಲಿ ಕಾರ್ಮಿಕ ಕುಸಿದುಬಿದ್ದು ಮೃತ್ಯು

ಅಡೂರು: ಕೂಲಿ ಕಾರ್ಮಿಕ ಕುಸಿದುಬಿದ್ದು ಮೃತಪಟ್ಟ ಘಟನೆ ನಡೆದಿದೆ.  ಅತ್ತನಾಡಿಯ ದಿ|  ಪುತ್ತರಿಯನ್-ವೆಳ್ಳಚ್ಚಿ ದಂಪತಿಯ ಪುತ್ರ ಕೋದನ್     (59) ಮೃತ ವ್ಯಕ್ತಿ. ಇವರು ಬೇತೂರುಪಾರದ ಲ್ಲಿರುವ ಪತ್ನಿ ಮನೆಯಲ್ಲಿ ವಾಸಿಸು ತ್ತಿದ್ದರು. ಮೊನ್ನೆ ಸಂಜೆ ಮನೆಯಲ್ಲಿ ಕುಸಿದು ಬಿದ್ದ ಕೋದನ್‌ರನ್ನು   ಕೂಡಲೇ ಬೇಡಗದ ತಾಲೂಕು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಚಂದ್ರನ್, ವಿನು, ಸರಸು, ಅಳಿಯ-ಸೊಸೆಯಂದಿರಾದ ಹರೀಶ್, ಸ್ವಪ್ನ, ರಜಿಲ, ಸಹೋದರ-ಸಹೋದರಿ ಯರಾದ ಸಂಜೀವನ್, ಚಿರುದ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page