ಕೇರಳ ಸಂಗೀತ ನಾಟಕ ಅಕಾಡೆಮಿ ಮಾಜಿ ಕಾರ್ಯದರ್ಶಿ ಪಿ. ಅಪ್ಪುಕುಟ್ಟನ್ ನಿಧನ

ಹೊಸದುರ್ಗ: ಕೇರಳ ಸಂಗೀತ ನಾಟಕ ಅಕಾಡೆಮಿ ಮಾಜಿ ಕಾರ್ಯದರ್ಶಿ ಪಿ. ಅಪ್ಪುಕುಟ್ಟನ್ (85) ನಿಧನ ಹೊಂದಿದರು. ಪಯ್ಯನ್ನೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನ ಸಂಭವಿಸಿದೆ. ಪುರೋಗಮನ ಕಲಾ ಸಾಹಿತ್ಯ ಸಂಘ ರಾಜ್ಯ ಕಾರ್ಯದರ್ಶಿ, ನಾಟಕ ಕಲಾವಿದ, ಅಧ್ಯಾಪಕ ಎಂಬೀ ರೀತಿಯಲ್ಲಿ ಪ್ರಸಿದ್ಧರಾಗಿದ್ದರು. 1996ರಿಂದ ಐದು ವರ್ಷಗಳ ಕಾಲ ಕೇರಳ ಸಂಗೀತ ನಾಟಕ ಅಕಾಡೆಮಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಸಿ.ಪಿ. ವತ್ಸಲ, ಮಕ್ಕಳಾದ ಸಿ.ಪಿ. ಶ್ರೀಹರ್ಷನ್, ಸಿ.ಪಿ. ಸರಿತ,  ಸಿ.ಪಿ. ಪ್ರಿಯದರ್ಶನ್, ಅಳಿಯ ಚಿತ್ತರಂಜನ್, ಸೊಸೆಯಂದಿರಾದ ಸಂಗೀತ, ಹನಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page