ಕೋಟ್ಟಯಂ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ: ವೈಫಲ್ಯಕ್ಕೆ ಸರಿಯಾದ ಸ್ಪಷ್ಟೀಕರಣನೀಡಲು ಸಾಧ್ಯವಾಗದ ಸರಕಾರ

ಕೋಟ್ಟಯಂ: ಕೋಟ್ಟಯಂ ವೈದ್ಯ ಕೀಯ ಕಾಲೇಜಿನ ಮೂರು ಅಂತಸ್ತಿನ ಹಳೆ ಕಟ್ಟಡ ನಿನ್ನೆ ಕುಸಿದುಬಿದ್ದು ಮಹಿಳೆಯೋರ್ವೆ ಸಾವನ್ನಪ್ಪಿ ಹಲವರು ಗಾಯಗೊಂಡ ಘಟನೆಗೆ ಸಂಬಂಧಿಸಿ ಅದಕ್ಕೆ ಸರಿಯಾದ ಸ್ಪಷ್ಟೀಕರಣ ನೀಡಲು ಸಾಧ್ಯವಾಗದ ಸ್ಥಿತಿ ಆರೋಗ್ಯ ಇಲಾಖೆ ಮತ್ತು ರಾಜ್ಯಸರಕಾರಕ್ಕೆ ಉಂಟಾಗಿದೆ.

 ಈ ಘಟನೆಗೆ ಸಂಬಂಧಿಸಿ ಹಲವು ಸಚಿವರು ಹಲವು ರೀತಿಯ ಸ್ಪಷ್ಟೀಕರಣ ವನ್ನು  ನೀಡಿ ಆ ಮೂಲಕ ಸರಕಾರದ ವತಿಯಿಂದ ಉಂಟಾದ ವೈಫಲ್ಯಕ್ಕೆ  ತೇಪೆಹಾಕುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಈ ವೈಫಲ್ಯದ ನಿಜವಾದ ಕಾರ ಣದ ಬಗ್ಗೆ ಯಾವುದೇ ರೀತಿಯ ಪ್ರತಿ ಕ್ರಿಯೆ ನೀಡಲು ಅವರು ಮುಂದಾ ಗುತ್ತಿಲ್ಲ.  ಇದು ಆಡಳಿತ ಪಕ್ಷವಾದ ಸಿಪಿಎಂನೊಳಗೇ ಇರಿಸುಮುರಿಸು ಸೃಷ್ಟಿಸುವಂತೆ ಮಾಡಿದೆ. ಪತ್ತನಂತಿಟ್ಟದ ಹಲವು ಸಿಪಿಎಂ ನೇತಾರರು ಆರೋಗ್ಯ ಇಲಾಖೆಯ ವತಿಯಿಂದ ಉಂಟಾದ ವೈಫಲ್ಯವನ್ನು ಟೀಕಿಸಿ  ಹೇಳಿಕೆಗಳನ್ನು ನೀಡಿದ್ದು, ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಿಪಿಎಂ ಮುಂದಾಗಿದೆ.

ಕೋಟ್ಟಯಂ ವೈದ್ಯಕೀಯ ಕಾಲೇ ಜಿನ ಹಳಯದಾದ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ನಿನ್ನೆ ಕುಸಿದು ಬಿದ್ದಿದೆ. ಆಗ ಆ ಕಟ್ಟಡದೊಳಗಿದ್ದ ಪಲಯೋಲಪರಂಬು ಉಮ್ಮುಕುನ್ನು   ಮೇಪತ್ತ್  ಕುನ್ನೇಲ್ ವಿಶುತ್ರ ಎಂಬವರ ಪತ್ನಿ ಡಿ. ಬಿಂದು (54) ಸಾವನ್ನಪ್ಪಿದ್ದರು. ಆ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದ ಅಲೀನಾ ವಿನ್ಸೆಂಟ್ (18), ಆಸ್ಪತ್ರೆ ಸಿಬ್ಬಂದಿ ಅಮಲ್ ಪ್ರದೀಪ್ (20) ಮತ್ತು ಜಿನು ನಾಜಿ (38) ಎಂಬವರು ಗಾಯಗೊಂಡಿದ್ದಾರೆ. ಕಟ್ಟಡ ಕುಸಿಯುವ ವೇಳೆ  ಅದರೊಳಗೆ ಇತರ ಹಲವು ರೋಗಿಗಳು ಮತ್ತು ಅವರ ಸಂಬಂಧಿಕರು ಇದ್ದರು. ಅದರೆಲ್ಲಾ ಅದೃಷ್ಟವಶಾತ್ ಅನಾಹುತದಿಂದ ಪಾರಾಗಿದ್ದಾರೆ.

ಕಟ್ಟಡ ಕುಸಿದುಬಿದ್ದಾಗ ಅದರೊಳಗೆ ಓರ್ವ ಸಿಲುಕಿಕೊಂಡಿದ್ದಾರೆಂದು ಅಲ್ಲಿದ್ದ ಹಲವರು ಆಸ್ಪತ್ರೆ ಅಧಿಕಾರಿಗಳಲ್ಲಿ ತಕ್ಷಣ ತಿಳಿಸಿದ್ದಾರೆ. ಅದನ್ನು ಅವರು ಕಿವಿಗೊಡಲಿಲ್ಲ. ಬಳಿಕ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮತ್ತು ಸಹಕಾರಿ ಸಚಿವ ವಿ.ಎನ್. ವಾಸವನ್ ಸ್ಥಳಕ್ಕಾಗಮಿ ಸಿದಾಗಲೂ ಅಲ್ಲಿದ್ದವರು ಆ ವಿಷಯ ಅವರ ಗಮನಕ್ಕೆ ತಂದರು.  ಆದರೆ ಅವರೂ ಅದನ್ನು ಅಂಗೀಕರಿಸಲಿಲ್ಲ. ಕುಸಿದು ಬಿದ್ದ ಕಟ್ಟಡದೊಳಗೆ ಯಾರೂ ಕುಳಿತಿಲ್ಲವೆಂದು ಆಸ್ಪತ್ರೆ ಅಧಿಕಾರಿ ಗಳು ತಿಳಿಸಿದರು. ನಂತರ ಹಿಟಾಚಿ ಸಹಾಯ ದಿಂದ ಮಧ್ಯಾಹ್ನ 13.45ಕ್ಕೆ ಕಟ್ಟಡ ಅವಶೇಷಗಳನ್ನು ತೆಗೆಯುವ ವೇಳೆ ಅದರೊಳಗೆ ಬಿಂದುವಿನ ಮೃತದೇಹ ಪತ್ತೆಯಾಗಿದೆ. ರಕ್ಷಣಾ ಕಾರ್ಯ ವಿಳಂಬಗೊಂಡಿರುವುದೇ  ಅವರ ಸಾವಿಗೆ ಕಾರಣವಾಯಿತೆಂದು ಆರೋಪಿಸಿ ಹಾಗೂ ಅದನ್ನು ಪ್ರತಿಭಟಿಸಿ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ಕಾರ್ಯ ಕರ್ತರು ಅಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page