ಕೋರೆಯ ಹೊಂಡದ ನೀರಿಗೆ ಬಿದ್ದು ಅವಳಿ ಸಹೋದರರ ದಾರುಣ ಮತ್ಯು

ಕಾಸರಗೋಡು: ಕೋರೆಯ ಹೊಂಡದ ನೀರಿಗೆ ಬಿದ್ದು ಅವಳಿ ಸಹೋದರರಾದ ಬಾಲಕರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಚೀಮೇನಿ ಕನಿಯಾಂತಲದ ರಾಧಾಕೃಷ್ಣನ್- ಪುಷ್ಪ ದಂಪತಿಯ ಮಕ್ಕಳಾದ ಸುದೇವ್ (10) ಮತ್ತು ಶ್ರೀ ದೇವ್ (10) ಸಾವನ್ನಪ್ಪಿದ ದುರ್ದೈವಿಗಳಾದ ಬಾಲಕರು. ಇವರಿಬ್ಬರು ಚೀಮೇನಿ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಐದನೇ ತರಗತಿಯ ವಿದ್ಯಾರ್ಥಿಗಳಾಗಿದ್ದಾರೆ.

ನಿನ್ನೆ ಮಧ್ಯಾಹ್ನ ಈ ಇಬ್ಬರು ಮಕ್ಕಳ ಸೈಕಲ್‌ನಲ್ಲಿ ಆಟಕ್ಕೆಂದು ಮನೆಯಿಂದ ಹೊರಕ್ಕೆ ಹೋಗಿದ್ದರು. ಸsಸಂಜೆಯಾದರೂ ಅವರು ಮನೆಗೆ ಹಿಂತಿರುಗದೆ ಇದ್ದಾಗ ಗಾಬರಿಗೊಂಡ ಮನೆಯವರು ಹುಡುಕಾಟ ಆರಂಭಿಸಿದಾಗ ಮನೆಯಿಂದ ಅಲ್ಪ ದೂರದಲ್ಲಿರುವ ಕ್ವಾರೆ ಬಳಿ ಸೈಕಲು ನಿಲ್ಲಿಸಿದ ಸ್ಥಿತಿಯಲ್ಲಿ ಪತ್ತೆಹಚ್ಚಿದ್ದಾರೆ. ಅದರಿಂದ ಶಂಕೆಗೊಂಡ ಮನೆಯವರು ಮತ್ತು ಊರವರು ಸೇರಿ ಕೋರೆ ನೀರಲ್ಲಿ ಹುಡುಕಾಟ ನಡೆಸಿದಾಗ ಅದರಲ್ಲಿ ಬಾಲಕರಿಬ್ಬರು  ಪತ್ತೆಯಾಗಿದ್ದಾರೆ. ತಕ್ಷಣ ಅವರಿಬ್ಬರನ್ನು ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಬಾಲಕರಿಬ್ಬರ ಮೃತದೇಹಗಳನ್ನು ಬಳಿಕ ಪರಿಯಾರಂ ಸರಕಾರಿ ವೈದ್ಯಕೀಯ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಲಾಯಿತು. ಚೀಮೇನಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದರು.

Leave a Reply

Your email address will not be published. Required fields are marked *

You cannot copy content of this page