ಕುಂಬಳೆ: ಕುಂಬಳೆ ಕೃಷ್ಣನಗರದಲ್ಲಿ ಜ್ಯೋತಿಷಿಯಾಗಿದ್ದ ಪಯ್ಯನ್ನೂರು ಮಠತ್ತುಂಪಾಡಿ ಮಾಂಕುಳತಿಲ್ಲತ್ತ್ ನಿವಾಸಿ ಎಂ. ವಿಷ್ಣು ನಂಬೂದಿರಿ (72) ನಿಧನಹೊಂದಿದರು. ಅಷ್ಟಮಂಗಲ ಜ್ಯೋತಿಷ್ಯ ಪ್ರಶ್ನೆಗಳನ್ನು ವಿವಿಧ ಕ್ಷೇತ್ರಗಳಲ್ಲಿ ನಡೆಸಿದ್ದರು. ಸಮಾಜ ಸೇವಕರಾಗಿದ್ದರು.
ಮೃತರು ತಾಯಿ ಸರಸ್ವತಿ ಅಂತರ್ಜನಂ, ಪತ್ನಿ ಎಂ. ರಮಣಿ ಅಂತರ್ಜನಂ, ಪುತ್ರ ಎಂ. ಪ್ರಸಾದ್,ಸೊಸೆ ಕೆ.ಇ. ಶ್ರೀವಿದ್ಯಾ, ಸಹೋದರರಾದ ಎಂ. ಕೃಷ್ಣನ್ ನಂಬೂದಿರಿ, ಎಂ. ನಾರಾಯಣನ್ ನಂಬೂದಿರಿ, ಸಹೋದರಿಯರಾದ ಸಾವಿತ್ರಿ ಅಂತರ್ಜನಂ, ದೇವಕಿ ಅಂತ ರ್ಜನಂ, ಸುವರ್ಣಿ ಅಂತರ್ಜ ನಂ, ಎಂ. ಸುಮ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.







