ಖ್ಯಾತ ಹಾವು ಹಿಡಿತಗಾರ ನಾಗರಹಾವಿನ ಕಡಿತದಿಂದ ಸಾವು
ಚೆನ್ನೈ: ತಮಿಳುನಾಡಿನಲ್ಲಿ ಖ್ಯಾತ ಹಾವು ಹಿಡಿತಗಾರನಾದ ಸಂತೋಷ್ ಕುಮಾರ್ (39) ಎಂಬವರು ನಾಗರಹಾವಿನ ಕಡಿತದಿಂದ ಸಾವಿಗೀಡಾದರು. ಮಡವಳ್ಳಿ ಎಂಬಲ್ಲಿನ ಮನೆಯೊಂದಕ್ಕೆ ನುಗ್ಗಿದ ನಾಗರಹಾವನ್ನು ಹಿಡಿಯಲೆತ್ನಿಸಿದಾಗ ಅದು ಕಚ್ಚಿತ್ತು. ಕೂಡಲೇ ಕೊಯಂಬತ್ತೂರಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಸಂತೋಷ್ ಕುಮಾರ್ 10ನೇ ಹರೆಯದಲ್ಲೇ ಹಾವು ಹಿಡಿಯಲು ಆರಂಭಿಸಿದ್ದರು. 25 ವರ್ಷಗಳ ಮಧ್ಯೆ ಕಾಳಿಂಗ ಸರ್ಪ ಸಹಿತ ನೂರಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದರು.