ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನದ ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ನಾಳೆ

ಬದಿಯಡ್ಕ: ಗಂಗಾಧರ ಆಳ್ವ ಸಾಂಸ್ಕೃತಿಕ ಪ್ರತಿಷ್ಠಾನ ವಳಮಲೆ ಬದಿಯಡ್ಕ ಇದರ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ನಾಳೆ ಅಪರಾಹ್ನ 2 ಗಂಟೆಗೆ ವಳಮಲೆ ಇರಾ ಸಭಾ ಭವನದಲ್ಲಿ ನಡೆಯಲಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಉದ್ಘಾಟಿಸುವರು. ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ಆಳ್ವ ಅಧ್ಯಕ್ಷತೆ ವಹಿಸುವರು. ಕಲ್ಲಗ ಚಂದ್ರಶೇಖರ ರಾವ್ ರಾಜ್ಯೋತ್ಸವ  ಸಂದೇಶ ನೀಡುವರು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಅಖಿ ಲೇಶ್ ನಗುಮುಗಂ, ಜಯದೇವ ಖಂಡಿಗೆ, ಗೋಪಾಲಕೃಷ್ಣ ಶುಭ ಹಾರೈಸುವರು. ತಾರನಾಥ ರೈ, ಪ್ರತೀಕ್ ಆಳ್ವ, ರಮೇಶ್ ಶೆಟ್ಟಿ ಗೌರಿಕೋಡಿ, ಕೃಷ್ಣ ಡಿ. ಬೆಳಿಂಜ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸಾಮಾಜಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿ ರುವ ಗಂಗಾಧರ ಬಲ್ಲಾಳ್ ಅಡ್ವಳ, ಆಯಿಷಾ ಪೆರ್ಲ, ಡಾ| ಶ್ರೀನಿಧಿ ಸರಳಾಯ, ಅಶ್ವಥ್ ಪೂಜಾರಿ ಲಾಲ್ ಭಾಗ್, ಯೋಗ ಶಿಕ್ಷಕಿ ತೇಜಕುಮಾರಿ ಎಂಬವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುವುದು. ಪರಮೇಶ್ವರ ನಾಯ್ಕ್ ಅರ್ತಲೆ ಇವರ ಕೃತಿ ‘ಸ್ನೇಹಾಮೃತ’ವನ್ನು ಪಿ. ಸುಬ್ರಾಯ ನಾಯ್ಕ್ ಬಿಡುಗಡೆಗೊಳಿ ಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರ ನೀಡಲಿದೆ. ಜ್ಞಾನೇ ಶ್ವರಿ ಬಂಟರ ಬಳಗ ಬದಿಯಡ್ಕದ ವರಿಂದ ಗಾನಯಾನ, ಯೋಗ ಫಾರ್ ಕಿಡ್ಸ್ ಕಾಸರಗೋಡು ಇವರಿಂದ ಯೋಗ ಪ್ರದರ್ಶನ ನಡೆಯಲಿದೆ.

RELATED NEWS

You cannot copy contents of this page