ಗಲ್ಫ್ ಉದ್ಯೋಗಿ ಮನೆಯಿಂದ ಕಳವು: ತನಿಖೆ ತೀವ್ರ

ಉಪ್ಪಳ: ಮಣ್ಣಂಗುಳಿ ಬಳಿಯ ಫಿರ್ದೌಸ್ ನಗರದಲ್ಲಿ ಗಲ್ಫ್ ಉದ್ಯೋಗಿ ಸಲಾಲ ಇಬ್ರಾಹಿಂ ಎಂಬವರ ಮನೆಯಿಂದ ನಗ-ನಗದು  ಕಳವಿಗೀಡಾದ ಪ್ರಕರಣದಲ್ಲಿ ಮಂಜೇಶ್ವರ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಆರೂವರೆ ಪವನ್ ಚಿನ್ನಾಭರಣ ಹಾಗೂ 15 ಸಾವಿರ ರೂಪಾಯಿ ಕಳವುಗೈದಿದ್ದಾರೆ. 

ಶುಕ್ರವಾರ ಮನೆಗೆ ಬೀಗ ಜಡಿದು ಕುಟುಂಬ ಸಂಬಂಧಿಕರ ಮನೆಗೆ ತೆರಳಿತ್ತು. ಶನಿವಾರ ಬೆಳಿಗ್ಗೆ ಮರಳಿ ಬಂದಾಗ ಮನೆಯ ಮುಂಭಾಗದ ಬಾಗಿಲು ಬೀಗ ಮುರಿದ ಸ್ಥಿತಿಯಲ್ಲಿತ್ತು. ಒಳಗೆ ಪ್ರವೇಶಿಸಿ ಪರಿಶೀಲಿಸಿದಾಗ ಕಪಾಟಿನಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಳವಿಗೀಡಾಗಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ಮನೆ ಯವರು ನೀಡಿದ ದೂರಿನ ಮೇವೆಗೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಇನ್‌ಸ್ಪೆಕ್ಟರ್ ಅನೂಬ್‌ರ ನೇತೃತ್ವದಲ್ಲಿ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ  ತಲುಪಿ ಪರಿಶೀಲನೆ ನಡೆಸಿ ದ್ದಾರೆ. ವರ್ಕಾಡಿ ಹಾಗೂ ಪರಿಸರ ಪ್ರದೇ ಶದಲ್ಲಿ ಇತ್ತೀಚೆಗೆ ಕಳ್ಳಥನ ನಡೆದಿತ್ತು. ಆ ಕುರಿತು ತನಿಖೆ ನಡೆಸುತ್ತಿರುವಾಗಲೇ ಮತ್ತೆ ಕಳ್ಳತನ ನಡೆದಿದೆ.

Leave a Reply

Your email address will not be published. Required fields are marked *

You cannot copy content of this page