ಗೋವಾ ಮದ್ಯ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಅಣಂಗೂರಿನಲ್ಲ್ಲಿ ಕಾಸರಗೋಡು ಎಕ್ಸೈಸ್ ಸ್ಪೆಷಲ್ ಸ್ಕ್ವಾಡ್‌ನ ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ಮುರಳಿ ಕೆ.ವಿ ನೇತೃತ್ವದ ಅಬಕಾರಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗೋವಾ ನಿರ್ಮಿತ 180 ಎಂ.ಎಲ್‌ನ ೪೮ ಬಾಟಲಿ (8.64 ಲೀಟರ್) ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಜೆ.ಪಿ.ನಗರ ಶಾಂತಿಯಡ್ಕ ನಿವಾಸಿ ಶಿವಕುಮಾರ್ ಶೆಟ್ಟಿ ಬಿ.ಜಿ (32) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ. ಬೈಕ್‌ನಲ್ಲಿ ಈ ಮಾಲು ಸಾಗಿಸಲಾಗುತ್ತಿ ತ್ತೆಂದೂ ಆದ್ದರಿಂದ ಬೈಕ್‌ನ್ನು ವಶಪಡಿಸಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಿವೆಂಟೀ ವ್ ಆಫೀಸರ್ (ಗ್ರೇಡ್) ಅಜೀಶ್ ಸಿ, ನೌಶಾದ್ ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಅತುಲ್ ಟಿ.ವಿ, ಶಜನ್ ವಿ.ವಿ, ಮತ್ತು ಧನ್ಯಾ ಟಿ.ವಿ ಎಂಬವರು  ಅಬಕಾರಿ ಕಾರ್ಯಾ ಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರ.

RELATED NEWS

You cannot copy contents of this page