ಚಂದ್ರಗಿರಿ ರಸ್ತೆ ದುರಸ್ತಿಯಲ್ಲಿ ಭ್ರಷ್ಟಾಚಾರ : ಬಿಎಂಎಸ್ ವಲಯ ಸಮಿತಿಯಿಂದ ಮಾರ್ಚ್

ಕಾಸರಗೋಡು: ಚಂದ್ರಗಿರಿ ರಸ್ತೆಯ ದುರಸ್ತಿಯಲ್ಲಿ ಉಂಟಾಗಿರುವ ಭ್ರಷ್ಟಾ ಚಾರದ ತನಿಖೆ ನಡೆಸಬೇಕು, ದುರಸ್ತಿ ನಡೆಸಿದ ಕರಾರುದಾರರ ಭ್ರಷ್ಟಾಚಾರಕ್ಕೆ ಬೆಂಬಲ ನೀಡಿದ ಅಧಿಕಾರಿಗಳ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಸಬೇಕು, ನಗರದಲ್ಲಿ ಶೋಚನೀಯ ಸ್ಥಿತಿಯಲ್ಲಿರುವ ರಸ್ತೆಗಳನ್ನು ಶೀಘ್ರ ದುರಸ್ತಿಗೊಳಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಭಾರತೀಯ ಮಜ್ದೂರ್ ಸಂಘ ಕಾಸರಗೋಡು ವಲಯ ಸಮಿತಿ ನೇತೃತ್ವದಲ್ಲಿ ಪಿಡಬ್ಲ್ಯುಡಿ ಕಚೇರಿ ಧರಣಿ, ಮಾರ್ಚ್ ನಡೆಸಲಾಯಿತು.

ಬಿಎಂಎಸ್ ಕಾಸರಗೋಡು ವಲಯ ಅಧ್ಯಕ್ಷ ಬಾಲಕೃಷ್ಣ ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದು, ಜಿಲ್ಲಾ ಕಾರ್ಯದರ್ಶಿ ಕೆ.ವಿ. ಬಾಬು ಉದ್ಘಾಟಿಸಿದರು. ಆಟೋರಿಕ್ಷಾ ಮಜ್ದೂರ್ ಸಂಘ ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ, ಬಿಎಂಎಸ್ ಜಿಲ್ಲಾ ಸಮಿತಿ ಸದಸ್ಯ ಎ. ಕೇಶವ ಶುಭ ಕೋರಿದರು. ಜಿಲ್ಲಾ ಜೊತೆ ಕಾರ್ಯದರ್ಶಿಗಳಾದ ಹರೀಶ್ ಕುದ್ರೆಪ್ಪಾಡಿ, ಗುರುದಾಸ್ ಮಧೂರು, ಆಟೋರಿಕ್ಷಾ ಮಜ್ದೂರ್ ಸಂಘ ವಲಯ ಅಧ್ಯಕ್ಷ ಉಮೇಶ್, ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷ ಅನಿಲ್ ಬಿ. ನಾಯರ್, ಪುಷ್ಪರಾಜ್ ರೈ ಕೊರಕ್ಕೋಡು,  ಮೋಹನ್ ದಾಸ್ ಕೊರಕ್ಕೋಡು, ಪ್ರಸಾದ್, ಸದಾಶಿವ ಪಾಂಡುರಂಗ, ಹರಿದಾಸನ್, ಮನೋಹರ ಭಾಗವಹಿಸಿದರು. ರಿಜೇಶ್ ಜೆ.ಪಿ.ನಗರ್ ಸ್ವಾಗತಿಸಿ, ಬಾಬುಮೋನ್ ವಂದಿಸಿದರು.

RELATED NEWS

You cannot copy contents of this page