ಚೂರಿಮೂಲೆಯ ಮೈಮೂನ ನಿಗೂಢ ಸಾವು: ಆರೋಪಿಗಳ ಬಂಧನಕ್ಕೆ ಒತ್ತಾಯಿಸಿ ನಾಳೆ ಆದೂರು ಪೊಲೀಸ್ ಠಾಣೆಗೆ ಮಾರ್ಚ್

ಕಾಸರಗೋಡು: ಚೆರ್ಕಳ ಚೂರಿ ಮೂಲೆಯ ಮೈಮೂನ ಎಂಬವರ ನಿಗೂಢ ಸಾವಿನಲ್ಲಿ ಆರೋಪಿಗಳಾದ ವರನ್ನು ಕೂಡಲೇ ಪತ್ತೆಹಚ್ಚಬೇಕೆಂದು ಒತ್ತಾಯಿಸಿ ಕ್ರಿಯಾ ಸಮಿತಿ ತೀವ್ರ ಚಳ ವಳಿಗೆ ನಿರ್ಧರಿಸಿದೆ. ಗೃಹಿಣಿ  ಸಾವಿಗೀ ಡಾಗಲು ಕಾಸರ ಗೋಡು ಜಿಲ್ಲೆಯಲ್ಲಿ ಕಾರ್ಯಾಚರಿಸುವ ಟ್ರೇಡ್ ಮಾಫಿಯಾ ವಂಚನಾ ತಂಡದ ಬಲೆಯಲ್ಲಿ ಸಿಲುಕಿರುವುದೇ ಆಗಿದೆ ಎಂದು ಕ್ರಿಯಾ ಸಮಿತಿ ಆರೋಪಿಸಿದೆ. ಕಳೆದ ಮಾರ್ಚ್ ೫ರಂದು ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮೈಮೂನ ಸಾವಿಗೀಡಾಗಿದ್ದರು. ಇವರ ಸಾವಿನ ಹಿಂದಿರುವ ನಿಗೂಢತೆಯನ್ನು ನಿವಾರಿಸಿ ಸಾವಿಗೆ ಕಾರಣರಾದವರನ್ನು ಕಾನೂನಿನ ಮುಂದೆ ಹಾಜರುಪಡಿಸಬೇಕು, ಅವರಿಗೆ ಅರ್ಹ ಶಿಕ್ಷೆ ಖಚಿತಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಸಾವಿಗೀಡಾದ ಮೈಮೂನರ ಕೈಯಿಂದ ವಂಚನಾ ತಂಡ ನಾಲ್ಕೂವರೆ ಕೋಟಿ ರೂಪಾಯಿಗಳನ್ನು ಲಪಟಾಯಿಸಿತ್ತು. ಆದ್ದರಿಂದ  ಸಾವಿಗೆ ಕಾರಣರಾದವರನ್ನು ಪತ್ತೆಹಚ್ಚುವುದರೊಂದಿಗೆ ಮಾಫಿಯಾ ತಂಡದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

ಇದಕ್ಕಾಗಿ ಸ್ಪೆಷಲ್  ತನಿಖಾ ತಂಡವನ್ನು ನೇಮಿಸಬೇಕೆಂದು ಒತ್ತಾಯಿಸಿ ಈ ತಿಂಗಳ 19ರಂದು ಬೆಳಿಗ್ಗೆ 10 ಗಂಟೆಗೆ ಆದೂರು ಪೊಲೀಸ್ ಠಾಣೆಗೆ ಮಾರ್ಚ್ ನಡೆಸಲು ಕ್ರಿಯಾ ಸಮಿತಿ ನಿರ್ಧರಿಸಿದೆ. ಪೊಲೀಸ್ ಠಾಣೆ ಮಾರ್ಚ್ ಹಾಗೂ ಧರಣಿಯನ್ನು ಉದುಮ ಶಾಸಕ ಸಿ.ಎಚ್. ಕುಂಞಂಬು ಉದ್ಘಾಟಿಸುವರು. ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ಸಾಮಾಜಿಕ ಕಾರ್ಯಕರ್ತರು ಭಾಗವಹಿಸುವರೆಂದು ಕ್ರಿಯಾ ಸಮಿತಿ ನೇತಾರರಾದ ಎ.ಬಿ. ಧನ್ಯವಾದ್, ಸಿ.ಕೆ.ಎಂ. ಮುನೀರ್, ಅಶ್ರಫ್ ಬೋವಿಕ್ಕಾನ, ಹನೀಫ್ ಆಶೀರ್ವಾದ್, ಎಂ.ಎಚ್. ಅಬ್ದುಲ್ ರಹಿಮಾನ್, ಬಿ.ಎಂ. ಅಶ್ರಫ್ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

RELATED NEWS

You cannot copy contents of this page