ಚೆಂಗಳ ನಿವಾಸಿ ಪಳಯಂಗಾಡಿಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ಚೆಂಗಳ ನಿವಾಸಿ ಯಾದ ಯುವಕನೋರ್ವ  ಪಯ್ಯ ನ್ನೂರು ಸಮೀಪ ಪಳಯಂ ಗಾಡಿಯಲ್ಲಿ ರೈಲು ಢಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾರೆ.  ಚೆಂಗಳ ಕೊಳತ್ತೂರು ನಿವಾಸಿ ಮುತ್ತು ನಾಯರ್‌ರ ಪುತ್ರ ಎ.ಎಂ. ಶ್ರೀಧರನ್ (44) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ 7.30ರ ವೇಳೆ ಇವರ ಮೃತದೇಹ ಪಳಯಂಗಾಡಿ ತಾವಂ  ಹಳೆಯ ರೈಲ್ವೇ ಗೇಟ್ ಸಮೀಪ ಪತ್ತೆಯಾಗಿದೆ. ರೈಲು ಢಿಕ್ಕಿ ಹೊಡೆದು ಸಾವು ಸಂಭವಿಸಿರುವುದಾಗಿ ಅಂದಾಜಿಸಲಾಗಿದೆ. ಮೃತದೇಹ ಪತ್ತೆಯಾದ ಬಗ್ಗೆ ನಾಗರಿಕರು ನೀಡಿದ ಮಾಹಿತಿಯಂತೆ ಪೊಲೀಸರು ತಲುಪಿ ಪರಿಶೀಲನೆ ನಡೆಸಿದರು. ಮೃತ ವ್ಯಕ್ತಿಯ ಅಂಗಿಯ  ಜೇಬಿನಲ್ಲಿದ್ದ ಆಧಾರ್ ಕಾರ್ಡ್‌ನಿಂದ   ಗುರುತು ಪತ್ತೆಹಚ್ಚಲಾಯಿತು. ಮೃತದೇಹವನ್ನು ಕಣ್ಣೂರು ಸರಕಾರಿ ಪರಿಯಾರಂ ಮೆಡಿಕಲ್ ಕಾಲೇಜು ಆಸ್ಪತ್ರೆಯ ಶವಾಗಾರಕ್ಕೆ ತಲುಪಿಸಲಾಗಿದೆ.

RELATED NEWS

You cannot copy contents of this page