ಜನಪ್ರತಿನಿಧಿಗಳಿಗೆ ಉಮ್ಮನ್‌ಚಾಂಡಿ ಮಾದರಿ- ಶಾಸಕ

ಕಾಸರಗೋಡು: ಓರ್ವ ಉತ್ತಮ ಜನಪ್ರತಿನಿಧಿಗೆ ಮಾಜಿ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಮಾದರಿಯಾಗಿದ್ದಾ ರೆಂದು ಶಾಸಕ ಎನ್.ಎ. ನೆಲ್ಲಿಕುನ್ನು ತಿಳಿಸಿದರು. ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ನಡೆಸಿದ ಉಮ್ಮನ್‌ಚಾಂಡಿ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕೇರಳದಲ್ಲಿ ಅಭಿವೃದ್ಧಿ ಅತೀ ಹೆಚ್ಚು ನಡೆದಿರುವುದು ಉಮ್ಮನ್‌ಚಾಂಡಿ ಅವರ ಮೂಲಕವಾಗಿದೆಯೆಂದೂ ಶಾಸಕ ನುಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೀವನ್ ನಂಬ್ಯಾರ್ ಅಧ್ಯಕ್ಷತೆ ವಹಿಸಿದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್ ಸಂಸ್ಮರಣಾ ಭಾಷಣ ನಡೆಸಿದರು. ಯುಡಿಎಫ್ ಜಿಲ್ಲಾ ಕಾರ್ಯದರ್ಶಿ ಗೋವಿಂದನ್ ನಾಯರ್, ಯುಡಿಎಫ್ ವಿಧಾನಸಭಾ ಕ್ಷೇತ್ರ ಸಂಚಾಲಕ ಕೆ. ಖಾಲಿದ್, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಉಮೇಶ್ ಅಣಂಗೂರು, ಪಿ.ಕೆ. ವಿಜಯನ್, ಉಷಾ ಎಸ್, ಸಿಜಿ, ಟೋನಿ, ಸಿ. ಶಿವಶಂಕರನ್, ಅಬ್ದುಲ್ ಸಮದ್, ಸೀತಾರಾಮ ಮಾಸ್ತರ್, ಕೆ.ವಿ. ಜೋಷಿ, ಚಂದ್ರಶೇಖರನ್ ಮಾಸ್ತರ್, ಶ್ರೀಧರನ್ ಅದುರ್ಕುಳಿ, ಸಂತೋಷ್ ಕ್ರಾಸ್ತಾ, ಸುಮಿತ್ರನ್ ಪಿ.ಪಿ. ಮೊದಲಾದವರು ಭಾಗವಹಿಸಿದರು.

RELATED NEWS

You cannot copy contents of this page