ಜಿಲ್ಲೆಯಲ್ಲಿ ೨೧೫೪ ಕಡುಬಡವರು: ಇವರ ಉದ್ಧಾರಕ್ಕೆ ಯೋಜನೆ

ಕಾಸರಗೋಡು:  ಕಡುಬಡತನ ನಿವಾರಣೆಗಾಗಿ ೨೦೨೪-೨೫ನೇ ವಾರ್ಷಿಕ ಯೋಜನೆಯಲ್ಲಿ ಗರಿಷ್ಠ ಆದ್ಯತೆ ನೀಡಲು ಜಿಲ್ಲಾ ಯೋಜನಾ ಸಮಿತಿಯಲ್ಲಿ ಕರಡು ನಿರ್ದೇಶ ನೀಡಲಾಗಿದೆ. ಜಿಲ್ಲೆಯಲ್ಲಿ ೨೧೫೪ ಕಡುಬಡವರಿದ್ದಾರೆಂದು ಲೆಕ್ಕಹಾಕಲಾಗಿದೆ. ಇವರಿಗೆ  ಬೇಕಾದ ಮೂಲಭೂತ ಸೌಕರ್ಯಗಳು, ಆರೋಗ್ಯ ಸಂರಕ್ಷಣೆ, ಅಭಿವೃದ್ಧಿ ಅಗತ್ಯಗಳು ಮೊದಲಾದವುಗಳನ್ನು  ಸೇರಿಸಿಕೊಂಡು ಕಡುವಡತನವನ್ನು ಪರಿಹರಿಸಲು ಪ್ರೊಜೆಕ್ಟ್‌ಗಳಿಗೆ ರೂಪು ನೀಡಬೇಕು. ಪಂಚಾಯತ್‌ಗಳು ಸಿದ್ಧಪಡಿಸಿದ ಮೈಕ್ರೋ ಪ್ಲಾನ್ ಯೋಜನೆ ಬ್ಲೋಕ್, ಜಿಲ್ಲಾ ಪಂಚಾ ಯತ್‌ಗಳಿಗೆ ವಹಿಸಿಕೊಳ್ಳ ಬೇಕೆಂದು ತಿಳಿಸಲಾಗಿದೆ.  ೨೫೨ ಮಂದಿಯ ಮನೆ ದುರಸ್ತಿ, ೨೯೫ ಮಂದಿಗೆ ಮನೆ, ಸ್ಥಳ ಲಭ್ಯಗೊಳಿಸುವುದು, ಸ್ಥಳ ಇರುವ ೧೮೦ ಮಂದಿಗೆ ಮನೆ ನೀಡುವುದು, ೨೦ ಮಂದಿಯ ಮನೆಗಳಿಗೆ ವಿದ್ಯುತ್ ಸಂಪರ್ಕ, ೫೬ ಮಂದಿಯ ಮನೆಗೆ ಕುಡಿಯುವ ನೀರು ಲಭ್ಯಗೊಳಿಸುವುದು, ೩೨ ಮಂದಿಗೆ ಪಾಯಿಖಾನೆ ಮೊದಲಾದವು ಯೋಜನೆಗಳಾಗಿವೆ.

RELATED NEWS

You cannot copy contents of this page