ಜಿಲ್ಲೆಯಲ್ಲಿ ಆಪರೇಷನ್ ಸೈಬರ್ ಹಂಟ್: 38 ಪ್ರಕರಣ ದಾಖಲು; 38 ಮಂದಿ ಸೆರೆ

ಕಾಸರಗೋಡು: ಸೈಬರ್ ಮೂಲಕ ನಡೆಯುತ್ತಿರುವ ಆರ್ಥಿಕ ಅಪರಾಧ ಕೃತ್ಯಗಳಲ್ಲಿ ಸಿಲುಕಿ ಕೊಂಡ ಬ್ಯಾಂಕ್ ಖಾತೆಗಳನ್ನು ಕೇಂದ್ರೀಕರಿಸಿ ಜಿಲ್ಲೆಯಲ್ಲಿ ಸೈಬರ್ ಹಂಟ್ ಎಂಬ ಹೆಸರಲ್ಲಿ ಜಿಲ್ಲೆಯಾದ್ಯಂತ ನಿನ್ನೆ ಪೊಲೀಸರು ಪರಿಶೀಲನೆ ನಡೆಸಿದರು. ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಬಿ.ವಿ. ವಿಜಯ್ ಭರತ್ ರೆಡ್ಡಿಯವರ ಮೇಲ್ನೋಟದಲ್ಲಿ ಜಿಲ್ಲಾ ಸೈಬರ್ ಕ್ರೈಂ ಬ್ರಾಂಚ್ ಪೊಲೀಸರ ಸಹಾ ಯದೊಂ ದಿಗೆ ಕಾರ್ಯಾಚರಣೆ ನಡೆಯಿತು. ಈ ಕಾರ್ಯಾಚರಣೆ ಯಲ್ಲಿ ಜಿಲ್ಲೆಯಲ್ಲಿ ಒಟ್ಟು 112 ಕೇಂದ್ರಗಳಲ್ಲಿ ಈ ಪರಿಶೀಲನೆ ನಡೆಸಲಾಯಿತು.

ಇದಕ್ಕೆ ಸಂಬಂಧಿಸಿ ಒಟ್ಟು 38 ಪ್ರಕರಣಗಳನ್ನು ದಾಖಲಿಸಲಾಗಿದ್ದು, 38 ಮಂದಿಯನ್ನು ಸೆರೆಹಿಡಿಯಲಾಗಿದೆ. ಇದರಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅತೀ ಹೆಚ್ಚು ಎಂಬಂತೆ 10 ಪ್ರಕರಣ ದಾಖಲಿಸಲಾಗಿದೆ.

ಸೈಬರ್ ಅಪರಾಧ ಕೃತ್ಯಗಳನ್ನು ವಂಚಕರು ಬ್ಯಾಂಕ್ ಖಾತೆಗಳನ್ನೇ ಕೇಂದ್ರೀಕರಿಸಿ ನಡೆಸುತ್ತಿದ್ದು, ಹೀಗೆ ಹಲವು ಬ್ಯಾಂಕ್ ಖಾತೆಗಳಿಂದ ಸೈಬರ್ ವಂಚಕರು ಹಣ ಎಗರಿಸುತ್ತಿರುವ ಅಪರಾಧ ಕೃತ್ಯಗಳು  ದಿನೇ ದಿನೇ ಹೆಚ್ಚಾಗುತ್ತಿದ್ದು ಅದನ್ನು ತಡೆಗಟ್ಟಲು ಸೈಬರ್ ತಜ್ಞರ ಸಹಾಯದೊಂದಿಗೆ ಪೊಲೀಸರು ಇಂತಹ ಸೈಬರ್ ಹಂಟ್ ಕಾರ್ಯಾಚರಣೆ ಆರಂಭಿಸಿದ್ದಾರೆ. ಇಂತಹ ಕಾರ್ಯಾಚರಣೆ ಇನ್ನೂ ಮುಂದುವರಿಯಲಿದೆಯೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page