ಸೀತಾಂಗೋಳಿ: ಸೋಲಾರ್ ಫಿಟ್ಟಿಂಗ್ ಕೆಲಸ ವೇಳೆ ತಲೆ ಸುತ್ತಿ ಬಿದ್ದು ಯುವಕ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಸೀತಾಂಗೋಳಿ ಮುಖಾರಿಕಂಡ ಕೋರಿಮೂಲೆಯ ದಿವಂಗತರಾದ ಕೇಶವ-ಜಯಂತಿ ದಂಪತಿ ಪುತ್ರ ಹರ್ಷರಾಜ್ (27) ಮೃತಪಟ್ಟ ವ್ಯಕ್ತಿ. ನೀರ್ಚಾಲು ಬಳಿಯ ಮಾಡತ್ತಡ್ಕದಲ್ಲಿ ಸಹೋದರಿ ಅರ್ಚನಾರ ಮನೆಯಲ್ಲಿ ಹರ್ಷರಾಜ್ ವಾಸಿಸುತ್ತಿದ್ದರು. ಸೀತಾಂಗೋಳಿಯ ಅಂಗಡಿಯೊಂದರ ನೌಕರನಾಗಿದ್ದರು. ನಿನ್ನೆ ಮಧ್ಯಾಹ್ನ ೨.೩೦ರ ವೇಳೆ ನೀರ್ಚಾಲು ಬಳಿ ರತ್ನಗಿರಿಯಲ್ಲಿ ಮನೆಯೊಂದರ ಸೋಲಾರ್ ಫಿಟ್ಟಿಂಗ್ ಕೆಲಸ ವೇಳೆ ತಲೆಸುತ್ತಿ ಇವರು ಬಿದ್ದಿದ್ದರು. ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೂ ಬಳಿಕ ಮಂಗಳೂರಿನ ಎಜೆ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಹರ್ಷರಾಜ್‌ರ ಸಾವಿನ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.






