ಕಾಸರಗೋಡು: ನಾಡಿನ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಸಲ್ಲದೆಂದೂ, ಅಂತಹ ಚಿಂತನೆ ಹೊರತುಪಡಿಸ ಬೇಕೆಂದು ಕೇಂದ್ರ ಮೀನುಗಾರಿಕೆ- ಪಶುಸಂಗೋಪನೆ- ಹೈನುಗಾರಿಕಾ ಭಿವೃದ್ಧಿ ಹಾಗೂ ಅಲ್ಪಸಂಖ್ಯಾತ ಸಹ ಸಚಿವ ಜೋರ್ಜ್ ಕುರ‍್ಯನ್ ಅಭಿಪ್ರಾ ಯಪಟ್ಟಿದ್ದಾರೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿಯ ನಿಲುವು ಕೂಡಾ ಆಗಿದೆ. ಪೆರಿಯಾದಲ್ಲಿನ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯಕ್ಕಾಗಿ ಹೊಸ ಅಕಾಡೆಮಿಕ್ ಬ್ಲೋಕ್ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿ ಅವರು ಮಾತನಾ ಡುತ್ತಿದ್ದರು. ಪ್ರಧಾನಮಂತ್ರಿ ಜನ್‌ವಿಕಾಸ್ ಕಾರ್ಯಕ್ರಮ್ (ಪಿಎಂಜಿವಿಕೆ) ಯೋಜನೆಯಲ್ಲಿ ಒಳಪಡಿಸಿ ಕೇಂದ್ರ ಅಲ್ಪಸಂಖ್ಯಾತ ಸಚಿವಾಲಯ ಮಂಜೂರು ಮಾಡಿರುವ ೫೨.೬೮ ಕೋಟಿ ರೂ. ವೆಚ್ಚದಲ್ಲಿ ಉಪಯೋಗಿಸಿ ಈ ನೂತನ ಬ್ಲೋಕ್ ಕಟ್ಟಡ ಸಮುಚ್ಚಯವನ್ನು ನಿರ್ಮಿಸಲಾಗುತ್ತಿದೆ. ಅಲ್ಪ ಸಂಖ್ಯಾತ ವಿಭಾಗಕ್ಕೆ ಸೇರಿದ ವಿದ್ಯಾರ್ಥಿಗಳ ಕೌಶಲ್ಯಾಭಿವೃದ್ಧಿಗಾಗಿ ಪಿ.ಎಂ. ವಿಕಾಸ್ ಯೋಜನೆ ಪ್ರಕಾರ ಡೆವಲಪ್‌ಮೆಂಟ್ ಆಂಡ್ ವಿಮನ್ ಎಂಟ್ರಪ್ರನರ್‌ಶಿಪ್ ಪ್ರೋಗ್ರಾಂನ್ನು ಕೋಟಯಂ ನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನೋಲಜಿ ಕೇಂದ್ರದಲ್ಲಿ ಆರಂಭಿಸಲಾಗಿದೆ. ಇದರ ಹೊರತಾಗಿ ಐಟಿಐ ಪಾಲಕ್ಕಾಡ್, ಕೊಚ್ಚಿ ಸೆಂಟ್ರಲ್ ಮರೈನ್ ಫಿಶರೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಸೇರಿದಂತೆ ಇತರ ಕೇಂದ್ರಗಳಲ್ಲಿ ಆಧುನಿಕ ಕಾಲಕ್ಕೆ ಹೊಂದಿಕೊಂಡು ಹಲವು ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.
ಕೇರಳ ಕೇಂದ್ರೀಯ ವಿವಿಯ ಉಪಕುಲಪತಿ ಪ್ರೊ| ಸಿದ್ದು ಪಿ. ಅಲ್‌ಗುರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಕಲಾಗಾರ ದೀಪಕ್ ಪಿ.ಕೆ. ಸೇರಿದಂತೆ ಹಲವರು ಭಾಗವಹಿಸಿ ಮಾತನಾಡಿದರು. ಈ ಕಾರ್ಯಕ್ರಮದ ಮೊದಲು ಸಚಿವರು ನಿನ್ನೆ ಬೆಳಿಗ್ಗೆ ಕಾಸರಗೋಡು ಮೀನುಗಾರಿಕಾ ಬಂದರಿನ ದ್ವಿತೀಯ ಹಂತದ ಅಭಿವೃದ್ಧಿ ಯೋಜನೆಗಳ ಪ್ರಗತಿಯ ಬಗ್ಗೆಯೂ ಅವಲೋಕನ ನಡೆಸಿದರು. ಎರಡನೇ ಹಂತದಲ್ಲಿ 70.53 ಕೋಟಿ ರೂ.ಗಳ ನಿರ್ಮಾಣ ಕೆಲಸಗಳು ಇಲ್ಲಿ ನಡೆಯು ತ್ತಿದ್ದು, ಅದರಲ್ಲಿ 51.03 ಕೋಟಿ ರೂ.ಗಳ ನಿರ್ಮಾಣ ಕೆಲಸ (ಶೇ 75)ಗಳು ಈಗಾಗಲೇ ಪೂರ್ಣಗೊಂ ಡಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪತ್ ಯೋಜನೆ ಪ್ರಕಾರ ಇಲ್ಲಿ ಈ ಯೋಜನೆ ಯ ನಿರ್ಮಾಣ ಕೆಲಸ ನಡೆಯುತ್ತಿದೆ.
ಹಾರ್ಬರ್ ಇಂಜಿನಿಯರಿಂಗ್ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಕೆ. ರೂಪೇಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಡಿನಿಯರ್ ಕೆ. ಬಾಬುಮೋನ್, ಅಸಿಸ್ಟೆಂಟ್ ಇಂಜಿನಿ ಯರ್ ಎಂ. ರಾಜೀವನ್, ಮೀನುಗಾರಿಕಾ ಉಪನಿರ್ದೇಶಕ ಕೆ.ಎ. ಲಬೀಬ್ ಫಿಶರೀಸ್ ಎಕ್ಸ್‌ಟೆನ್ಶನಲ್ ಆಫೀಸರ್ ಚಂದನ ದಿವಾಕರನ್, ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್, ಉಪಾಧ್ಯಕ್ಷ ಪಿ. ರಮೇಶ್, ನಗರಸಭಾ ಕೌನ್ಸಿಲರ್‌ಗಳಾದ ರಜನಿ, ಅಜಿತ್, ಉಮಾಕಡಪುರಂ ಸೇರಿದಂತೆ ಹಲವರು ಈ ವೇಳೆ ಸಚಿವರ ಜತೆಗಿದ್ದರು. ಇದೇ ರೀತಿ ಮಧೂರು ಪಂಚಾಯತ್‌ನ ಪಾರೆಕಟ್ಟೆ ರುದ್ರ ಭೂಮಿಯಲ್ಲಿ ಸ್ಮಶಾನದಲ್ಲಿ ನೂತನವಾಗಿ ನಿರ್ಮಿಸಲಾದ ಅಡುಗೆ ಗ್ಯಾಸ್‌ಚಾಲಿತ ಸ್ಮಶಾನದ ಉದ್ಘಾಟನೆ ಯನ್ನೂ ಸಚಿವರು ನೆರವೇರಿಸಿದರು. ಶಾಸಕ ಎನ್.ಎ. ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಮಧೂರು ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ, ಉಪಾಧ್ಯಕ್ಷೆ ಸ್ಮಿಜಾ ವಿನೋದ್, ರಾಧಾಕೃಷ್ಣ ಸೂರ್ಲು, ಯಶೋಧಾ ಎಸ್. ನಾಯಕ್, ಉಮೇಶ್ ಗಟ್ಟಿ, ಸುಕುಮಾರ ಕುದ್ರೆಪ್ಪಾಡಿ, ಜಿ. ಶ್ರೀಮತಿ, ನಸೀರಾ, ಸಿ. ಉದಯ್ ಕುಮಾರ್, ಎಂ. ಜಲೀಲ್, ಹಬೀಬ್ ಚೆಟ್ಟುಂಗುಳಿ, ಟಿ.ಕೆ. ಜನನಿ, ಕೆ. ರತೀಶ್, ಸಿ.ಎಚ್. ಉದಯ್ ಕುಮಾರ್ ಮೊದಲಾದವರು ಮಾತನಾಡಿದರು. ವಾರ್ಡ್ ಸದಸ್ಯೆ ಸ್ಮಿತ ಸುಧಾಕರನ್ ಸ್ವಾಗತಿಸಿ, ಪಂ. ಕಾರ್ಯದರ್ಶಿ ನಿತು ಶಿಜಿಮೋನ್ ವಂದಿಸಿದರು.






