ಜೈಲಿನ ಮುಂದೆ ಮೆರವಣಿಗೆ ರಾಹುಲ್ ಮಾಂಕುಟ್ಟತ್ತಿಲ್, ಶಾಸಕರ ವಿರುದ್ಧ ಕೇಸು

ತಿರುವನಂತಪುರ: ಪೂಜಾಪುರ ಜೈಲಿನ ಮುಂದೆ ಹರ್ಷ ಮೆರವಣಿಗೆ ನಡೆಸಿದ ಸಂಬಂಧ ಕಾಂಗ್ರೆಸ್ ನೇತಾರರಾದ ರಾಹುಲ್ ಮಾಂಕುಟ್ಟತ್ತಿಲ್ ಹಾಗೂ ಶಾಸಕರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಶಾಫಿ ಪರಂಬಿಲ್, ಅನ್ವರ್ ಸಾದತ್‌ರ ಸಹಿತ ಕಂಡರೆ ಪತ್ತೆಹಚ್ಚಬಹುದಾದ ೫೦ಕ್ಕೂ ಹೆಚ್ಚು ಮಂದಿ ವಿರುದ್ಧ  ಕೇಸು ದಾಖಲಿಸಲಾಗಿದೆ. ಸಾರಿಗೆ ಅಡಚಣೆ ಸೃಷ್ಟಿಸಲಾಗಿದೆ. ಅದೇ ರೀತಿ ಜೈಲು ಅಧಿಕಾರಿಗಳ ಸಂಘಟನೆಯ ಬೋರ್ಡ್ ನಾಶಗೊಳಿಸಲಾಗಿದೆ ಎಂದು ಕೇಸು ದಾಖಲಿಸಲಾಗಿದೆ. ಸೆಕ್ರೆಟರಿಯೇಟ್ ಮಾರ್ಚ್ ವೇಳೆ ಉಂಟಾದ ಘರ್ಷಣೆಗೆ ಸಂಬಂಧಿಸಿ ಸೆರೆಗೀಡಾದ ಯೂತ್ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ರಾಹುಲ್ ಮಾಂಕುಟ್ಟತ್ತಿಲ್ ಮೊನ್ನೆ ರಾತ್ರಿ ಜೈಲಿನಿಂದ ಬಿಡುಗಡೆಗೊಂಡಿದ್ದರು. ೮ ದಿನಗಳ ಜೈಲು ವಾಸದ ಬಳಿಕ ಬಿಡುಗಡೆಗೊಂಡ ಅವರಿಗೆ ಕಾಂಗ್ರೆಸ್ ನೇತಾರರು ಹಾಗೂ ಕಾರ್ಯಕರ್ತರು ಅದ್ದೂರಿಯ ಸ್ವಾಗತ ಏರ್ಪಡಿಸಿದ್ದರು.

RELATED NEWS

You cannot copy contents of this page