ತಿರುವಾಭರಣ ಶೋಭಾಯಾತ್ರೆ ಇಂದು

ಪತ್ತನಂತಿಟ್ಟ: ಮಕರಜ್ಯೋತಿ ದಿನದಂದು ಶಬರಿಮಲೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ವಿಗ್ರಹಕ್ಕೆ ತೊಡಿಸಲಿರುವ ತಿರುವಾಭರಣ ಒಳಗೊಂಡ ಶೋಭಾಯಾತ್ರೆ ಇಂದು ಮಧ್ಯಾಹ್ನ ೧ ಗಂಟೆಗೆ ಪಂ ದಳದಿಂದ ಹೊರಡಲಿದೆ.  ಪರಂಪ ರಾಗತ ದಾರಿಯಲ್ಲಿ ಸಂಚರಿಸುವ ಶೋಭಾಯಾತ್ರೆ ೧೫ರಂದು ಸಂಜೆ ಸನ್ನಿಧಾನಕ್ಕೆ ತಲುಪಲಿದೆ. ಬಳಿಕ ತಿರುವಾಭರಣವನ್ನು ಶ್ರೀ ಅಯ್ಯಪ್ಪ ಸ್ವಾಮಿಯ ವಿಗ್ರಹಕ್ಕೆ ತೊಡಿಸಿ ದೀಪಾರಾಧನೆ ನಡೆಸಲಾಗುವುದು. ಇದೇ ಸಂದರ್ಭದಲ್ಲಿ ಪೊನ್ನಂಬಲ   ಬೆಟ್ಟದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ.

 ಇದೇ ವೇಳೆ ಮಕರಜ್ಯೋತಿ ದರ್ಶನಕ್ಕೆ ಬೇಕಾದ ಸಿದ್ಧತೆಗಳು ಅಂತಿಮ ಹಂತಕ್ಕೆ ತಲುಪಿದೆ. ಪುಲ್ಲುಮೇಡ್, ಪರುಂದುಪಾರ, ಪಾಂಚಾಲಿಮೇಡ್ ಎಂಬಿಡೆಗಳಲ್ಲಿ ನಿಂತು  ಜ್ಯೋತಿ ದರ್ಶನ ನಡೆಸಲು ಸೌಕರ್ಯ ಏರ್ಪಡಿಸಲಾಗಿದೆ.

You cannot copy contents of this page