ಕಾಸರಗೋಡು: ರಾಜ್ಯದಲ್ಲಿ ಅತೀ ತೀವ್ರ ಮಳೆ ಮುಂದುವರಿಯಲಿ ದೆಯೆಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇಂದು ಎರಡು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಾಸರಗೋಡು, ಕಣ್ಣೂರು ಜಿಲ್ಲೆಗ ಳಲ್ಲಿ ತೀವ್ರ ಮಳೆ ಮುಂದುವರಿಯ ಲಿದೆಯೆಂದು ಮುನ್ಸೂಚನೆಯಲ್ಲಿ ತಿಳಿಸಲಾಗಿದೆ. ಅದೇ ರೀತಿ ಕಾಸರ ಗೋಡು, ಕಣ್ಣೂರು, ಕಲ್ಲಿಕೋಟೆ, ವಯನಾಡು, ಮಲಪ್ಪುರಂ ಜಿಲ್ಲೆಗಳ ಕೆಲವೆಡೆ ಸಾಮಾನ್ಯ ಮಳೆ ಹಾಗೂ ಗಂಟೆಗೆ 40 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಲಿದೆಯೆಂದೂ ತಿಳಿಸಲಾಗಿದೆ. ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿರುವವರು ಜಾಗ್ರತೆ ಪಾಲಿಸಬೆಕು. ಪ್ರತಿಕೂಲ ಹವಾಮಾನವಿದ್ದಲ್ಲಿ ಕರ್ನಾಟಕ, ಲಕ್ಷದ್ವೀಪ್ ಕರಾವಳಿಯಲ್ಲಿ ಮೀನುಗಾರಿಕೆಗೆ ತೆರಳಕೂಡದೆಂದೂ ತಿಳಿಸಲಾಗಿದೆ.







