ತೆಂಗಿನಕಾಯಿ ಕೊಯ್ಯುವ ಕಾರ್ಮಿಕ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ಕಾಸರಗೋಡು: ತೆಂಗಿನಕಾಯಿ ಕೊಯ್ಯುವ ಕಾರ್ಮಿಕ ವಾಸಸ್ಥಳದಲ್ಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಉದುಮ ಸಮೀಪದ ತಚ್ಚಂಗಾಡ್ ಅರವತ್ ಪಾಲತ್ತೋಡು ಹೌಸ್‌ನ ಸುನಿಲ್ ಕುಮಾರ್  (ಚಿಕ್ಕಣ್ಣನ್ 44) ಸಾವನ್ನಪ್ಪಿದ ವ್ಯಕ್ತಿ. ಪ್ಲಾಸ್ಟಿಕ್ ಶೀಟ್ ಹೊದಿಸಿದ ಮನೆಯಲ್ಲಿ ಸುನಿಲ್ ಕುಮಾರ್ ಏಕಾಂಗಿಯಾಗಿ ವಾಸಿಸುತ್ತಿದ್ದರು. ನಿನ್ನೆ ಅವರ ತಾಯಿ ಲಲಿತ ಅಲ್ಲಿಗೆ ಬಂದಾ ಗ ಸುನಿಲ್ ಕುಮಾರ್ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ನಂತರ ಆಬಗ್ಗೆ ನೀಡಲಾದ ಮಾಹಿತಿಯಂತೆ ಬೇಕಲ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹದ ಮಹಜರು ನಡೆಸಿದ ನಂತರ ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ  ಸಾಗಿಸಿದರು.

ಮೃತರು ತಾಯಿಯ ಹೊರತಾಗಿ ಸಹೋದರಿ ಶುಭ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಬೇಕಲ ಪೊಲೀಸರು ತನಿಖೆ ಆರಂಭಿಸಿದ್ದಾರೆ.

RELATED NEWS

You cannot copy contents of this page