ದುರಸ್ತಿಗಾಗಿ ನಿಲ್ಲಿಸಿದ್ದ ಕಾರು, ಗೂಡ್ಸ್ ಆಟೋ ಬೆಂಕಿಗಾಹುತಿ

ಕುಂಬಳೆ: ದುರಸ್ತಿಗಾಗಿ ನಿಲ್ಲಿಸಿದ್ದ ಸ್ವಿಫ್ಟ್ ಕಾರು ಹಾಗೂ ಗೂಡ್ಸ್ ಆಟೋ ಉರಿದು ನಾಶಗೊಂಡ ಘಟನೆ ನಡೆದಿದೆ.

ಕುಂಬಳೆ ಪೊಸ್ರಡ್ಕ ನಿವಾಸಿಯೂ ಮೆಕ್ಯಾನಿಕ್ ಆಗಿರುವ ಮದುಸೂಧನ್‌ರ ಮನೆಯ ಮುಂಭಾಗ ನಿಲ್ಲಿಸಿದ್ದ ವಾಹನಗಳು ಉರಿದು ನಾಶಗೊಂಡಿವೆ. ನಿನ್ನೆ ಮಧ್ಯಾಹ್ನ ವೇಳೆ ಈ ಘಟನೆ ನಡೆದಿದೆ. ವಾಹನಗಳಿಗೆ ಬೆಂಕಿ ತಗಲಿದ ಬಗ್ಗೆ ತಿಳಿದು ಕಾಸರಗೋಡಿನಿಂದ ತಲುಪಿದ ಮೂರು ಯೂನಿಟ್ ಅಗ್ನಿಶಾಮಕದಳ ತಲುಪಿ ಬೆಂಕಿ ನಂದಿಸಿದೆ. ಗೂಡ್ಸ್ ಆಟೋ ಕೊಯಿಪ್ಪಾಡಿ ಕಡಪ್ಪುರದ ಕಾಯಿಂಞಿ ಎಂಬವರದ್ದಾಗಿದೆ. ಕಾರು ಮಂಜೇಶ್ವರ ನಿವಾಸಿಯದ್ದಾಗಿದ್ದು, ಇವುಗಳನ್ನು ದುರಸ್ತಿಗಾಗಿ ತಂದು ನಿಲ್ಲಿಸಲಾಗಿತ್ತು. ಬೆಂಕಿ ಹೇಗೆ ತಗಲಿದೆ ಎಂದು ತಿಳಿದು ಬಂದಿಲ್ಲ.

You cannot copy contents of this page