ನಟ ಶಿಹಾಸ್ ಕರೀಂ ಆರೋಪಿಯಾದ  ಕಿರುಕುಳ ಪ್ರಕರಣ: ಮೂನಾರ್, ಮರೆಯೂರ್‌ನಲ್ಲಿ ಮಾಹಿತಿ ಸಂಗ್ರಹ

ಹೊಸದುರ್ಗ:  ಮದುವೆ ಭರವಸೆ ನೀಡಿ ೩೨ರ ಹರೆಯದ, ಜಿಮ್ನೇಶಿಯಂ ತರಬೇತುದಾರೆ ಯಾದ ಯುವತಿಗೆ  ಲೈಂಗಿಕ ಕಿರುಕುಳ ನೀಡಿ ಬಳಿಕ ಆಕೆ ಗರ್ಭಿಣಿಯಾದಾಗ ಎರಡು ಬಾರಿ ಗರ್ಭಛಿದ್ರ ನಡೆಸಿದ ಪ್ರಕರಣದಲ್ಲಿ  ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ. ಪ್ರಕರಣದ ಆರೋಪಿ ಹಾಗೂ ಎರ್ನಾಕುಳಂ ನಿವಾಸಿಯಾದ ಸಿನಿಮಾ,  ಧಾರಾವಾಹಿ ನಟ ಶಿಹಾಸ್ ಕರೀಂನ ವಿರುದ್ಧ ಪ್ರಕರಣ ನಾಳೆ ನ್ಯಾಯಾಲಯ  ಪರಿಗಣಿಸಲಿರುವಂತೆಯೇ ಪೊಲೀಸರು ತನಿಖೆ ತೀವ್ರಗೊಳಿ ಸಿದ್ದಾರೆ. ಚಂದೇರ ಎಸ್‌ಐ ಎಂ.ವಿ. ಶ್ರೀದಾಸ್, ಸಿಪಿಒ ಗಳಾದ ದಿಲೀಶ್, ರಮೇಶ್ ಎಂಬಿವರನ್ನೊಳಗೊಂಡ  ತಂಡ ಮೂನಾರ್, ಮರೆಯೂರ್ ಎಂಬಿಡೆಗಳಲ್ಲಿ  ಮಾಹಿತಿ ಸಂಗ್ರಹ ಮುಂದುವರಿಸಿದೆ. ಅಲ್ಲಿನ ಲಾಡ್ಜ್‌ಗಳಲ್ಲಿ ವಾಸಿಸಿರುವುದಾಗಿ ಕಿರುಕುಳಕ್ಕೊಳಗಾದ ಯುವತಿ ಈ ಹಿಂದೆ ಹೇಳಿಕೆ ನೀಡಿದ್ದಳು. ಪ್ರಕರಣದಲ್ಲಿ ಆರೋಪಿಯಾದ ಶಿಹಾಸ್ ಕರೀಂ ಗಲ್ಫ್‌ನಿಂದ ಮರಳುತ್ತಿದ್ದಾಗ ಇತ್ತೀಚೆಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಸೆರೆಗೀಡಾಗಿದ್ದನು. ಆತನ ಬಂಧನ ದಾಖಲಿಸುವ ಮೊದಲು ಶಿಹಾಸ್‌ಗೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ಲಭಿಸಿತ್ತು.   

RELATED NEWS

You cannot copy contents of this page