ನವೀನ್‌ಬಾಬುರಿಗೆ ಲಂಚ ಕೊಟ್ಟ ಬಗ್ಗೆ ಪುರಾವೆಗಳಿಲ್ಲ ವಿಜಿಲೆನ್ಸ್ ವರದಿ
ತಿರುವನಂತಪುರ: ಕಣ್ಣೂರು ಎಡಿಎಂ ನವೀನ್‌ಬಾಬುರಿಗೆ ಟಿ.ವಿ. ಪ್ರಶಾಂತ್ ಲಂಚ ನೀಡಿರುವುದಕ್ಕೆ ಸಾಕ್ಷಿ ಇಲ್ಲವೆಂದು ವಿಜಿಲೆನ್ಸ್‌ನ ಪ್ರಾಥಮಿಕ ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಎಡಿಎಂ ನವೀನ್ ಬಾಬುರಿಗೆ ಲಂಚ ಕೊಟ್ಟಿರುವುದಾಗಿ ಪ್ರಶಾಂತ್‌ನ ಹೇಳಿಕೆಯಲ್ಲದೆ ಬೇರೆ ಯಾವುದೇ ದಾಖಲೆಗಳಿಲ್ಲವೆಂದು ವಿಜಿಲೆನ್ಸ್ ಪತ್ತೆಹಚ್ಚಿದೆ. ಪುರಾವೆ ಹಾಜರುಪಡಿಸಲು ಪ್ರಶಾಂತ್‌ಗೆ ಸಾಧ್ಯವಾಗಿಲ್ಲವೆಂದು ವಿಜಿಲೆನ್ಸ್ ವರದಿಯಲ್ಲಿ ತಿಳಿಸಿದೆ. ಕಲ್ಲಿಕೋಟೆ ವಿಜಿಲೆನ್ಸ್ ಸ್ಪೆಷಲ್ ಸೆಲ್ ಎಸ್‌ಪಿ ಈ ಬಗ್ಗೆ ತನಿಖೆ ನಡೆಸಿದ್ದಾರೆ. ಆದರೆ ಪ್ರಶಾಂತ್‌ನ ಕೆಲವು ಹೇಳಿಕೆಗಳನ್ನು ಪುಷ್ಟೀಕರಿಸುವ ದಾಖಲೆಗಳು ಅಥವಾ ದೃಶ್ಯಗಳು ಇದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.