ನಾಪತ್ತೆಯಾದ ಐಟಿಐ ವಿದ್ಯಾರ್ಥಿ ಕಾಡಿನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಪಾಲಕ್ಕಾಡ್: ಇಲ್ಲಿನ ಪರಂಬಿಕುಳ ಎಂಬಲ್ಲಿಂದ 2 ದಿನಗಳ ಹಿಂದೆ ನಾಪತ್ತೆ ಯಾದ ಐಟಿಐ ವಿದ್ಯಾರ್ಥಿ ಕಾಡಿ ನೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಎರ್ತ್ ಡ್ಯಾಂ ಉನ್ನತಿ ಎಂಬಲ್ಲಿನ ಮುರು ಗಪ್ಪನ್- ಸುಗಂಧಿ ದಂಪತಿಯ ಪುತ್ರ ಎಂ. ಅಶ್ವಿನ್ (21) ಮೃತ ವಿದ್ಯಾರ್ಥಿ. ಕಳೆದ ಮಂಗಳವಾರ ಮಧ್ಯಾಹ್ನ ಬಳಿಕ ಅಶ್ವಿನ್ ನಾಪತ್ತೆಯಾಗಿದ್ದನು. ಮನೆ ಯಿಂದ 3 ಕಿಲೋ ಮೀಟರ್ ಅಂತರ ದಲ್ಲಿರುವ ಟೈಗರ್ ಹಾಲ್‌ನಲ್ಲಿ ನಡೆದ ಶಿಬಿರದಲ್ಲಿ ಭಾಗವಹಿಸಿ ಮರಳಿದ ಅಶ್ವಿನ್  ಬಳಿಕ ನಾಪತ್ತೆಯಾಗಿದ್ದನೆನ್ನ ಲಾಗಿದೆ. ಈ ಬಗ್ಗೆ ತಂದೆ ನೀಡಿದ ದೂರಿನಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಶೋಧ ನಡೆಸುತ್ತಿದ್ದ ವೇಳೆ ಪ್ಲಾಂಟೇಶನ್ ಭಾಗದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಈತ ಪತ್ತೆಯಾಗಿದ್ದಾನೆ. ಈತ ಅಟ್ಟಪ್ಪಾಡಿ ಐಟಿಐಯ ಮೆಕ್ಯಾನಿಕಲ್ ವಿದ್ಯಾರ್ಥಿಯಾಗಿದ್ದನು.

Leave a Reply

Your email address will not be published. Required fields are marked *

You cannot copy content of this page