ನಾಪತ್ತೆಯಾದ ಯುವತಿ ಮೃತದೇಹ ಕೆರೆಯಲ್ಲಿ ಪತ್ತೆ

ಹೊಸದುರ್ಗ: ಚೀಮೇನಿಯಿಂದ ನಾಪತ್ತೆಯಾದ ಯುವತಿಯ ಮೃತದೇಹ ಮನೆ ಬಳಿಯ ಬಯಲಿನಲ್ಲಿರುವ ಕೆರೆಯಲ್ಲಿ ಪತ್ತೆಯಾಗಿದೆ.

ವಡಕ್ಕೇಕರದ ಸುನಿಲ್ ಎಂಬವರ ಪತ್ನಿ ಕೆ.ಟಿ. ಬೀನ (40) ಸಾವಿಗೀಡಾದ ಯುವತಿ. ಸೋಮ ವಾರ ಬೆಳಿಗ್ಗೆ ಮಗುವನ್ನು ಅಂಗನ ವಾಡಿಗೆ ತಲುಪಿಸಿದ ಬಳಿಕ ಮನೆಗೆ ಮರಳಿದ್ದರು. ಅನಂತರ ಮುಳಕ್ಕೋ ದಲ್ಲಿರುವ ಕೆಲಸ ಸ್ಥಳಕ್ಕೆ ತೆರಳುವು ದಾಗಿ ತಿಳಿಸಿ ಹೋಗಿದ್ದರೆನ್ನಲಾಗಿದೆ. ಸಂಜೆ ಮರಳಿ ಬಾರದ ಹಿನ್ನೆಲೆಯಲ್ಲಿ ಪತಿಯ ಸಹೋದರ ಸತೀಶನ್  ನೀಡಿದ ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದರು. ಈ ಮಧ್ಯೆ ನಿನ್ನೆ ಮಧ್ಯಾಹ್ನ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ.

RELATED NEWS

You cannot copy contents of this page