ನಾರಂಪಾಡಿ ಕ್ಷೇತ್ರ ಬ್ರಹ್ಮಕಲಶಾಭಿಷೇಕ: ಬೆಳ್ಳೂರು ಪ್ರಾದೇಶಿಕ ಸಮಿತಿ ರಚನೆ

ಬದಿಯಡ್ಕ: ನಾರಂಪಾಡಿ ಶ್ರೀ ಉಮಾ ಮಹೇಶ್ವರ ಕ್ಷೇತ್ರದ ನವೀಕರಣ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ಫೆ. ೨ರಿಂದ ಜರಗಲಿದ್ದು,  ಇದರ ಯಶಸ್ವಿಗೆ  ಬೆಳ್ಳೂರು ದೇವಸ್ಥಾನದಲ್ಲಿ ಪ್ರಾದೇಶಿಕ ಸಮಿತಿ ರೂಪೀಕರಿಸಲಾಯಿತು.  ಗೌರವಾಧ್ಯಕ್ಷರಾಗಿ ವಿ.ಎಸ್. ಸುಬ್ರಹ್ಮಣ್ಯ ಕಡಂಬಳಿತ್ತಾಯ,  ಶಂಕರನಾರಾಯಣ ಕಡಂಬಳಿತ್ತಾಯ, ಪದ್ಮನಾಭ ಮಣಿಯಾಣಿ ಕುಳದಪಾರೆ, ಕಲ್ಲಗ ಚಂದ್ರಶೇಖರ ರಾವ್, ಡಾ. ಮೋಹನ್‌ದಾಸ್ ರೈ ಕೊಡಂಕಿರಿ,   ಪಂ. ಅಧ್ಯಕ್ಷ ಶ್ರೀಧರ ಎಂ, ಅಧ್ಯಕ್ಷರಾಗಿ  ಬೆಳ್ಳೂರು ಕ್ಷೇತ್ರ ಟ್ರಸ್ಟಿ ಗಂಗಾಧರ ಬಲ್ಲಾಳ್, ಉಪಾಧ್ಯಕ್ಷರಾಗಿ ಪಂ. ಉಪಾಧ್ಯಕ್ಷೆ ಗೀತಾ, ಬೆಳ್ಳೂರು ಕೋ ಆಪರೇಟಿವ್ ಬ್ಯಾಂಕ್ ಕಾರ್ಯದರ್ಶಿ ಉದಯ ಕುಮಾರ್   ಎನ್, ರವೀಂದ್ರನಾಥ್ ಶೆಟ್ಟಿ, ಸತ್ಯನಾರಾಯಣ ಬಲ್ಲಾಳ್, ಜಯರಾಜ್ ರೈ,  ರಾಘವ ಕನಕತ್ತೋಡಿ, ಚಂದ್ರಶೇಖರ ರೈ, ಭರತ್ ಬಸ್ತಿ, ದಾಮೋದರ ಕುಲಾಲ್, ನರೇಂದ್ರ ಕುಮಾರ್,ಚಂದ್ರಶೇಖರ ಆಚಾರ್ಯ, ಕುಂಞಿರಾಮ ಮಾಸ್ತರ್, ಮಾಲತಿ ಜೆ ರೈ, ಜಯಾನಂದ ಕುಲಾಲ್, ರವಿಶಂಕರ್ ಯಾದವ್ ಬಜ, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಹಾಸ ರೈ ಮುಂಡಾಸು, ಕಾರ್ಯದರ್ಶಿಯಾಗಿ ಪ್ರದೀಪ್ ಕುಮಾರ್ ಪುಳಿತ್ತಡಿ, ಗಣೇಶ್ ರೈ ಮುಂಡಾಸು, ಹರ್ಷ ಪ್ರಸಾದ್ ರೈ, ಗಣೇಶ್ ಆಚಾರ್ಯ,  ಗುರುರಾಜ್ ಅನೆಕ್ಕಳ, ರವೀಂದ್ರ ಪೂಜಾರಿ, ರವೀಶ್ ರೈ ಮುಂಡಾಸು, ಕೋಶಾಧಿಕಾರಿಯಾಗಿ ರೋಹಿತ್ ಬನದಗದ್ದೆ ಆಯ್ಕೆಯಾದರು.

You cannot copy contents of this page