ನಾಳೆ ಖಾಸಗಿ ಬಸ್ ಮುಷ್ಕರ

ಕಾಸರಗೋಡು: ವಿವಿಧ ಬೇಡಿಕೆಗಳನ್ನು ಮುಂದಿರಿಸಿಕೊಂಡು ರಾಜ್ಯದಲ್ಲಿ ನಾಳೆ ಖಾಸಗಿ ಬಸ್ ಮುಷ್ಕರ ನಡೆಯಲಿರುವುದು. ದೀರ್ಘ ಕಾಲದಿಂದ ಸಂಚಾರ ನಡೆಸುವ ಲಿಮಿಟೆಡ್ ಸ್ಟಾಪ್ ಬಸ್‌ಗಳು ಮತ್ತು  ದೀರ್ಘದೂರ ಬಸ್‌ಗಳ ಪರ್ಮಿಟ್‌ಗಳನ್ನು ಸಕಾಲದಲ್ಲಿ ನವೀಕರಿಸಿ ನೀಡಬೇಕು, ಅರ್ಹತೆ ಇರುವ ವಿದ್ಯಾರ್ಥಿಗಳಿಗೆ ಮಾತ್ರ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕು, ವಿದ್ಯಾರ್ಥಿಗಳ ಪ್ರಯಾಣ ದರವನ್ನು ಸಕಾಲದಲ್ಲಿ ಪರಿಷ್ಕರಿಸಬೇಕು, ಬಸ್ ಕಾರ್ಮಿಕರಿಗೆ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೆಟ್ ಕಡ್ಡಾಯಗೊಳಿಸಿದ ಕ್ರಮವನ್ನು ಹಿಂತೆಗೆಯಬೇಕು ಸಹಿತ ವಿವಿಧ ಬೇಡಿಕೆಗಳನ್ನು ಮುಂದಿರಿಸಿ ನಾಳೆ ಬಸ್ ಸೂಚನಾ ಮುಷ್ಕರ  ನಡೆಸುವುದಾಗಿ ಕೇರಳ ಸ್ಟೇಟ್ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಶನ್‌ನ ಕಾಸರಗೋಡು ಜಿಲ್ಲಾ ಘಟಕ ಪದಾಧಿಕಾರಿಗಳು ತಿಳಿಸಿದ್ದಾರೆ. ಬೇಡಿಕೆಗಳನ್ನು ಸರಕಾರ ಅಂಗೀಕರಿಸದಿದ್ದಲ್ಲಿ ಈ ತಿಂಗಳ ೨೨ರಿಂದ  ಅನಿರ್ದಿಷ್ಠಾವಧಿ ಮುಷ್ಕರ ನಡೆಸುವುದಾಗಿಯೂ ತಿಳಿಸಲಾಗಿದೆ.

RELATED NEWS

You cannot copy contents of this page