ನಾಳೆಯ ಕೆಲಸ ಸ್ಥಗಿತ ಮುಷ್ಕರ: ಕುಂಬಳೆಯಲ್ಲಿ ಮೆರವಣಿಗೆ

ಕುಂಬಳೆ: ಕೇಂದ್ರ ಸರಕಾರದ ಜನವಿರುದ್ಧ ನೀತಿ, ಕಾರ್ಮಿಕ ವಿರುದ್ಧ ನೀತಿ ಎಂದು ಆರೋಪಿಸಿ ನಾಳೆ ನಡೆಸುವ ಅಖಿಲಭಾರತ ಕೆಲಸ ಸ್ಥಗಿತ ಮುಷ್ಕರದಂಗವಾಗಿ ಆಕ್ಷನ್ ಕೌನ್ಸಿಲ್ ಆಫ್ ಸ್ಟೇಟ್ ಎಂಪ್ಲೋಯೀಸ್ ಆಂಡ್ ಟೀಚರ್ಸ್‌ನ ನೇತೃತ್ವದಲ್ಲಿ ರಾಜ್ಯ ಸರಕಾರಿ ನೌಕರರು, ಅಧ್ಯಾಪಕರು ಕುಂಬಳೆ ಪೇಟೆಯಲ್ಲಿ ರ‍್ಯಾಲಿ ನಡೆಸಿದರು. ಎನ್‌ಜಿಒ ಯೂನಿಯನ್ ಜಿಲ್ಲಾ ಜೊತೆ ಕಾರ್ಯದರ್ಶಿ ವೇಣುಗೋಪಾಲ್, ಕೆಎಸ್‌ಟಿಎ ಜಿಲ್ಲಾ ಕೋಶಾಧಿಕಾರಿ ರಾಜೇಶ್ ಕೆ.ವಿ, ಎಫ್‌ಎಸ್‌ಇಟಿಒ ವಲಯ ಕಾರ್ಯದರ್ಶಿ ಎಂ.ಎಸ್. ಜೋಸ್, ಎನ್‌ಜಿಒ ಯೂನಿಯನ್ ಏರಿಯಾ ಸೆಕ್ರೆಟರಿ ಶರೀಫ್ ಪಿ. ನೇತೃತ್ವ ನೀಡಿದರು.

Leave a Reply

Your email address will not be published. Required fields are marked *

You cannot copy content of this page