ನಿದ್ರಿಸಿದ್ದ ಬಾಲಕಿಗೆ ದೌರ್ಜನ್ಯ: ಕೊಯಿಪ್ಪಾಡಿ ನಿವಾಸಿ ಸೆರೆ

ಕಾಸರಗೋಡು: ಗೆಳೆಯನ ಮನೆಗೆ ತಲುಪಿ ಸಂಬಂಧಿಕೆಯಾದ  ಬಾಲಕಿ ಯನ್ನು ದೌರ್ಜನ್ಯಗೈದ ಕುಂಬಳೆ, ಕೊಯಿಪ್ಪಾಡಿ ನಿವಾಸಿಯನ್ನು ಪೋಕ್ಸೋ ಪ್ರಕಾರ ಕೇಸು ದಾಖಲಿಸಿ ಬಂಧಿಸಲಾಗಿದೆ. ಕೊಯಿಪ್ಪಾಡಿ ಬಾತಿಷ ಮಂಜಿಲ್‌ನ ದಾವೂದ್ ಹಕೀಂ (೨೫)ನನ್ನು ಶ್ರೀಕಂಠಾಪುರಂ ಎಸ್‌ಐ ಖದೀಜ ಬಂಧಿಸಿದ್ದಾರೆ.

ಇತ್ತೀಚೆಗೆ ಘಟನೆ ನಡೆದಿದೆ. ಶ್ರೀಕಂಠಾಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಓರ್ವ ಗೆಳೆಯನ ಮನೆಗೆ ಕಾರು ಸಹಿತ ದಾವೂದ್ ತಲುಪಿದ್ದನು. ಮನೆ ಮಂದಿಯೊಂದಿಗೆ ಪಕ್ಕನೆ ಬೆರೆತು ಉತ್ತಮ ಸಂಬಂಧವನ್ನು ಬೆಳೆಸಿದ ಈತ ಅಂದು ರಾತ್ರಿ ಅದೇ ಮನೆಯಲ್ಲಿ   ತಂಗಿದ್ದನು. ರಾತ್ರಿ ವೇಳೆ ನಿದ್ರಿಸಿದ್ದ ೮ನೇ ತರಗತಿ ವಿದ್ಯಾರ್ಥಿನಿ ಯಾದ ಬಾಲಕಿ ಯನ್ನು ಹೊರಗೆ ಕರೆದುಕೊಂಡು ಹೋಗಿ ಜನವಾಸವಿ ಲ್ಲದ ಮನೆಗೆ ತಲುಪಿಸಿ ದೌರ್ಜನ್ಯ ಗೈದು ಈ ಬಗ್ಗೆ ಬಹಿರಂಗಪಡಿಸಿದರೆ ಕೊಲ್ಲುವುದಾಗಿ ಬೆದರಿಸಿದ್ದನು. ಆದರೆ ಬಾಲಕಿ ಈ ಬಗ್ಗೆ ಹೆತ್ತವರಲ್ಲಿ ತಿಳಿಸಿದ್ದಾಳೆ. ಈ ಹಿನ್ನೆಲೆ ಯಲ್ಲಿ  ಹೆತ್ತವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಲುಪಿ ಕೇಸು ದಾಖಲಿಸಿ ಈತನನ್ನು ಬಂಧಿಸಿದ್ದಾರೆ. ಎರ್ನಾಕುಳಂ ಕಲ್ಲೂರ್‌ನ ಹೋಟೆಲ್‌ವೊಂದರಲ್ಲಿ ದಾವೂದ್ ಕಾರ್ಮಿಕನಾಗಿದ್ದಾ ನೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page