ನಿಧನ
ಉಪ್ಪಳ: ಮೂಲತಃ ಐಲ ರಾಗಿಹಿತ್ತಿಲು ನಿವಾಸಿ ಪ್ರಸ್ತುತ ಕರ್ನಾಟಕ ಸಜಿಪದಲ್ಲಿ ವಾಸವಾಗಿದ್ದ ನಾರಾಯಣ ಬೆಳ್ಚಾಡ ಕುಡೂರು (80) ನಿಧನ ಹೊಂದಿದರು. ಇವರು 30 ವರ್ಷಗಳ ಹಿಂದೆ ಉಪ್ಪಳ ಪರಿಸರದಲ್ಲಿ ನವರಾತ್ರಿ ವೇಷ ಹಾಕಿ ಎಲ್ಲರಿಗೂ ಪರಿಚಿತರಾಗಿದ್ದರು.
ಮೃತರು ಪತ್ನಿ ಯಶೋಧ, ಮಕ್ಕಳಾದ ರಾಜೇಶ್, ರೇಶ್ಮಾ, ಸೊಸೆ ವಾಣಿಶ್ರೀ, ಅಳಿಯ ಮೋಹನ, ಸಹೋದರಿ ಜಾನಕಿ, ಸಹೋದರ ಐತ್ತಪ್ಪ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ನಿಧನಕ್ಕೆ ಐಲ ಮಲಯಾಳಿ ಬಿಲ್ಲವ ಸಂಘ ಸಂತಾಪ ಸೂಚಿಸಿದೆ.