ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಲು ಒತ್ತಾಯಿಸಿ ಕ್ರಿಯಾ ಸಮಿತಿಯಿಂದ ಧರಣಿ

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ನುಳ್ಳಿಪ್ಪಾಡಿಯಲ್ಲಿ ಅಂಡರ್ ಪ್ಯಾಸೇಜ್ ನಿರ್ಮಿಸಬೇಕೆಂದು ಒತ್ತಾಯಿಸಿ ಕಾಸರಗೋಡು ನಗರಸಭಾ ವ್ಯಾಪ್ತಿಯ ೭, ೮, ೯, ೧೭, ೧೮ ವಾರ್ಡ್‌ಗಳ ಜನತೆ ಕ್ರಿಯಾ ಸಮಿತಿ ನೇತೃತ್ವದಲ್ಲಿ ನುಳ್ಳಿಪ್ಪಾಡಿಯಲ್ಲಿ ಇಂದು ಧರಣಿ ನಡೆಸಿದರು. ಧರಣಿಯನ್ನು ನಗರಸಭಾ ಕೌನ್ಸಿಲರ್ ಪಿ. ರಮೇಶ್ ಉದ್ಘಾಟಿಸಿದರು. ನಗರಸಭಾ ಕೌನ್ಸಿಲರ್ ಎಂ. ಲಲಿತ ಅಧ್ಯಕ್ಷತೆ ವಹಿಸಿದರು. ಕ್ರಿಯಾ ಸಮಿತಿ ಕನ್ವೀನರ್ ನಗರಸಭಾ ಕೌನ್ಸಿಲರ್ ವರಪ್ರಸಾದ್ ಕೋಟೆಕಣಿ,  ಕ್ರಿಯಾ ಸಮಿತಿ ಕನ್ವೀನರ್ ಅನಿಲ್ ಚೆನ್ನಿಕ್ಕೆರೆ, ನಗರಸಭಾ ಕೌನ್ಸಿಲರ್‌ಗಳಾದ  ಶಾರದ, ವಿಮಲ ಶ್ರೀಧರ, ಡಾ. ಅಪ್ಸಲ್, ಹಾರಿಸ್ ನುಳ್ಳಿಪ್ಪಾಡಿ, ಬಿ.ಎಂ.ಎಸ್. ಜಿಲ್ಲಾ ಅಧ್ಯಕ್ಷ ಕೆ. ಉಪೇಂದ್ರ, ಹೈಯರ್ ಗೂಡ್ಸ್ ಜಿಲ್ಲಾಧ್ಯಕ್ಷ ಬಿಂದು ಸುರೇಂದ್ರನ್, ವೈದ್ಯರುಗಳಾದ ಡಾ| ನಾಗರಾಜ ಭಟ್, ಡಾ| ಜಯದೇವ ಕಂಗಿಲ, ನುಳ್ಳಿಪ್ಪಾಡಿ ಶ್ರೀ ಅಯ್ಯಪ್ಪ ಕ್ಷೇತ್ರ ಪದಾಧಿಕಾರಿಗಳು, ನುಳ್ಳಿಪ್ಪಾಡಿ ಮಹಿಯುದ್ದೀನ್ ಮಸೀದಿ ಸಮಿತಿ ಪದಾಧಿಕಾರಿಗಳು, ತಳಂಗರೆ ಕ್ಲಸ್ಟರ್, ನೇತಾಜಿ ರೆಸಿಡೆನ್ಸಿ, ಸುರಭಿ ರೆಸಿಡೆನ್ಸಿ ಪದಾಧಿಕಾರಿಗಳು ಸಹಿತ ಹಲವು ಮಂದಿ ಭಾಗವಹಿಸಿದರು.

You cannot copy contents of this page