ಪಂಚಾಯತ್ ಕಚೇರಿಯಿಂದ ಬ್ಯಾಟರಿ ಕಳವು: ತಾತ್ಕಾಲಿಕ ಚಾಲಕ ಬಂಧನ

ಕಾಸರಗೋಡು: ಪಂಚಾಯತ್ ಕಚೇರಿಯಿಂದ ಯುಪಿಎಸ್ ಮತ್ತು 10 ಬ್ಯಾಟರಿಗಳು ಸೇರಿ 15,000 ರೂ . ಮೌಲ್ಯದ ಸಾಮಗ್ರಿಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ತಾತ್ಕಾಲಿಕ ಚಾಲಕನನ್ನು ಚಿತ್ತಾರಿ ಕ್ಕಲ್ ಪೊಲೀಸರು ಬಂಧಿಸಿದ್ದಾರೆ.

ಚಿತ್ತಾರಿಕ್ಕಲ್ ತಲ್ಲೋಲ ಪೊಯಿ ಲ್‌ನ ಸೆಬಾಸ್ಟಿನ್ (36) ಬಂಧಿತ ಆರೋಪಿ. ಈಸ್ಟ್ ಎಳೇರಿ ಪಂ ಚಾಯತ್ ಕಚೇರಿಯಿಂದ ಯುಪಿಎಸ್ ಮತ್ತು ಬ್ಯಾಟರಿಗಳನ್ನು ಕಳೆದ ಅಗೋಸ್ತ್ 14ರಂದು ಕಳವುಗೈಯ್ಯಲಾಗಿತ್ತು. ಆ ಬಗ್ಗೆ ಪಂಚಾಯತ್  ಕಾರ್ಯದರ್ಶಿ ವಿ.ಆರ್. ಮನೋಜ್ ಚಿತ್ತಾರಿಕ್ಕಲ್ ಪೊಲೀಸರಿಗೆ ದೂರು ನೀಡಿದ್ದರು. ಆ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ  ತನಿಖೆ ಆರಂಭಿಸಿದಾಗ ಅದೇ ಕಚೇರಿಯ ತಾತ್ಕಾಲಿಕ ವಾಹನ ಚಾಲಕನಾದ ಆರೋಪಿ ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದನು. ಅದನ್ನು ಪರಿಶೀಲಿಸಿದ ನ್ಯಾಯಾಲಯ ನೀಡಿದ ನಿರ್ದೇಶ ಪ್ರಕಾರ ಪೊಲೀಸರು ಆರೋಪಿಯನ್ನು ಬಂಧಿಸಿ ನಂತರ ಜಾಮೀನಿನಲ್ಲಿ ಬಿಡುಗಡೆಗೊಳಿಸಿದ್ದಾರೆ.

RELATED NEWS

You cannot copy contents of this page