ಪಣಿಕ್ಕರ್‌ರ ಬಳೆ ಕಳವು: ತನಿಖೆ ಆರಂಭ

ಕಾಸರಗೋಡು: ಖ್ಯಾತ ದೈವ ಕಲಾವಿದನ ಬಳೆ ಕಳವುಗೈದ ಪ್ರಕರಣದಲ್ಲಿ ಬೇಕಲ ಪೊಲೀಸರು ತನಿಖೆ ಆರಂಭಿಸಿ ದ್ದಾರೆ. ಪೆರಿಯ ಆಯಂಬಾರ ಕುಂಡೂರು ನಿವಾಸಿ ರಜೀಶ್ ಪಣಿಕ್ಕರ್‌ರ ೪ ಪವನ್ ತೂಕದ ಬಳೆಯನ್ನು ಕಳವುಗೈಯ್ಯ ಲಾಗಿದೆ. ಪೆರಿಯ ಪೂಕುಳದ ಮನೆಯಲ್ಲಿ ನಡೆದ ದೈವ ಕೋಲಕ್ಕೆ ರಜೀಶ್ ಪಣಿಕ್ಕರ್ ತಲುಪಿದ್ದರು. ಕೋಲ ಕಟ್ಟುವ ಸಿದ್ಧತೆ ಮಧ್ಯೆ  ಕೈಯಲ್ಲಿ ಧರಿಸಿದ್ದ ಬಳೆಯನ್ನು ತೆಗೆದು  ಇರಿಸಿದ್ದರು. ಇಲ್ಲಿಂದ ಬಳೆ ಕಳವುಹೋಗಿ ದೆಯೆಂದು ರಜೀಶ್ ಪಣಿಕ್ಕರ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

RELATED NEWS

You cannot copy contents of this page