ಪತ್ನಿಯನ್ನು ನೋಡಲು ತಲುಪಿದ ಯುವಕನನ್ನು ನೆರೆಮನೆ ನಿವಾಸಿ ಕೊಡಲಿಯಿಂದ ಕಡಿದು ಕೊಲೆ

ಕಟ್ಟಪ್ಪನ: ಗರ್ಭಿಣಿಯಾದ ಪತ್ನಿಯನ್ನು ನೋಡಲೆಂದು ಬಂದ ಯುವಕನನ್ನು ನೆರೆಮನೆ ನಿವಾಸಿ ಕೊಡಲಿಯಿಂದ ಕಡಿದು ಕೊಲೆಗೈದ ಘಟನೆ ನಡೆದಿದೆ. ಕಾಂಚಿಯಾರ್ ಕಕ್ಕಾಟ್‌ಕಡವಿನ ಕಡಪ್ಪುರೈಕಲ್ ಸುಬಿನ್ ಫ್ರಾನ್ಸಿಸ್ (35) ಕೊಲೆಗೀಡಾದ ವ್ಯಕ್ತಿ. ನಿನ್ನೆ ಸಂಜೆ ಕಟ್ಟಪ್ಪನ ಸುವರ್ಣಗಿರಿಯಲ್ಲಿರುವ ಪತ್ನಿಯನ್ನು ನೋಡಲೆಂದು ಇವರು ತಲುಪಿದ್ದರು. ಪತ್ನಿ ಲಿಬಿಯರ ಮನೆಗೆ ತಲುಪಿದಾಗ ನೆರೆಮನೆ ನಿವಾಸಿ ಬಾಬು ಮಧ್ಯೆ ವಾಗ್ವಾದ ಉಂಟಾಗಿದ್ದು, ಅದು ಘರ್ಷಣೆಗೆ ತಿರುಗಿ ಕೊಲೆಯಲ್ಲಿ ಪರ್ಯಾವಸಾನಗೊಂಡಿದೆ.

ವಾಗ್ವಾದ ಮಧ್ಯೆ ಕೊಡಲಿಯಿಂದ ಬಾಬು ಸುಬಿನ್‌ರಿಗೆ ಕಡಿದಿದ್ದಾನೆ. ಗಾಯಗೊಂಡ ಸುಬಿನ್‌ರನ್ನು ಕೂಡಲೇ ಕಟ್ಟಪ್ಪನ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಘಟನೆಯ ಬಳಿಕ ಮನೆಯಲ್ಲಿ ಅಡಗಿ ಕುಳಿತಿದ್ದ ಬಾಬುವನ್ನು ಸೆರೆ ಹಿಡಿಯಲು ತಲುಪಿದ ಪೊಲೀಸರ ವಿರುದ್ಧವೂ ಮಾರಕಾಯುಧದಿಂದ ಆಕ್ರಮಣ ನಡೆಸಲು ಬಾಬು ಮುಂದಾಗಿದ್ದಾನೆ.

ಈ ಘಟನೆಯಲ್ಲಿ ಎಸ್‌ಐ ಉದಯ ಕುಮಾರ್‌ಗೂ ಗಾಯ ಉಂಟಾಗಿದೆ. ಬಾಬುನ ವಿರುದ್ಧ ಹಲವಾರು ದೂರುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page