ಪೈವಳಿಕೆಯಲ್ಲಿ ಸಿಐಟಿಯು ಸ್ಥಾಪಕ ದಿನಾಚರಣೆ

ಪೈವಳಿಕೆ: ಸಿಐಟಿಯು ಸ್ಥಾಪಕ ದಿನವನ್ನು ಪೈವಳಿಕೆಯಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸ ಲಾಯಿತು. 1970 ಮೇ 30ರಂದು ಸ್ಥಾಪಿತಗೊಂಡ ಸಿಐಟಿಯುಗೆ ಈಗ ೫೪ ವರ್ಷ ತುಂಬಿದೆ. ಈ ಹಿನ್ನೆಲೆಯಲ್ಲಿ  ಸಿಐಟಿಯು ಕಾರ್ಯಕರ್ತರು ಪೈವಳಿಕೆ ವಿಲ್ಲೇಜ್ ಆಫೀಸ್ ಪರಿಸರವನ್ನು ಶುಚಿಗೊಳಿಸಿದರು. ಧ್ವಜಾರೋಹಣ, ಸಭೆ, ಮೆರವಣಿಗೆ ನಡೆಯಿತು. ಏರಿಯಾ ಸಮಿತಿ ಸದಸ್ಯ ಬಾಬು ವಾದ್ಯಪಡ್ಪು ಅಧ್ಯಕ್ಷತೆ ವಹಿಸಿದರು ಉಪಾಧ್ಯಕ್ಷ ಚಂದ್ರ ನಾಕ್ ಮಾನಿಪ್ಪಾಡಿ ಉದ್ಘಾಟಿಸಿದರು. ಶ್ರೀನಿವಾಸ ಭಂಡಾರಿ, ಮಾಲತಿ ಮಾತನಾಡಿದರು. ಉದಯ ಮುನ್ನೂರು ಸ್ವಾಗತಿಸಿ, ಅಶೋಕ್ ಕೊಮ್ಮಂಗಳ ವಂದಿಸಿದರು . ರಾಬರ್ಟ್ ಮೊಂತೇರೋ, ಶಿವರಾಮ ನೇತೃತ್ವ ನೀಡಿದರು. ಜಿಲ್ಲಾ ಸಮಿತಿ ಸದಸ್ಯ ಗಿರಿಕೃಷ್ಣ ಭಾಗವಹಿಸಿದರು.

RELATED NEWS

You cannot copy contents of this page