ಪ್ರಗತಿಪರ ಕೃಷಿಕ ಶ್ರೀಕೃಷ್ಣ ರಾವ್ ಪೆರಿಯಾಲ್ ನಿಧನ

ಪೆರ್ಲ: ಪ್ರಗತಿಪರ ಕೃಷಿಕರಾ ಗಿದ್ದು, ಕೃಷಿ ಪರ ಸಂಘಟನೆ  ಕಿಸಾನ್ ಸೇನೆ ಪದಾಧಿಕಾರಿಯಾಗಿ  ಕೃಷಿಕರ ಸಮಸ್ಯೆಗಳಿಗೆ ಧ್ವನಿಯೆತ್ತಿದ್ದ  ಕಜಂ ಪಾಡಿ ಸಮೀಪದ ಪೆರಿಯಾಲ್ ನಿವಾಸಿ ಮುಕುಂದ ಭಟ್ ಎಂದೇ ಪರಿಚಿತರಾಗಿದ್ದ ಶ್ರೀಕೃಷ್ಣ ರಾವ್ ಪೆರಿಯಾಲ್ (77) ನಿಧನಹೊಂದಿ ದರು. ಅಲ್ಪಕಾಲದ ಅಸೌಖ್ಯದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದರು.  ಜೈಕಿಸಾನ್ ಎಂಬ  ಬಸ್ ಸರ್ವೀ ಸನ್ನು ಈ ಹಿಂದೆ ಆರಂಭಿಸಿದ್ದರು. ಪೆರ್ಲದಲ್ಲಿ ಬೇಕರಿ ಯನ್ನು ಆರಂಭಿಸಿ ಹಲವರಿಗೆ ಉದ್ಯೋಗ ನೀಡಿದ್ದ ಇವರು ಅವಿವಾಹಿತರಾಗಿದ್ದರು. ಪುತ್ತೂರಿನ ಸಹೋದರಿಯ ಮ ಯಲ್ಲಿ ವಾಸವಾಗಿದ್ದ ಇವರು  ಸಹೋ ದರಿಯರಾದ ಲೀಲಾವತಿ, ಸುಶೀಲಾ, ಸೀತಾದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಸಹೋದರಿಯರಾದ ಲಕ್ಷ್ಮಿ, ಮೀನಾಕ್ಷಿ, ಭಾರತಿ, ಸಹೋದರ ಹರಿಶ್ಚಂದ್ರ ಈ ಹಿಂದೆ ನಿಧನರಾಗಿದ್ದಾರೆ.

RELATED NEWS

You cannot copy contents of this page