ಪ್ರತಾಪನಗರದಲ್ಲಿ ಮರಬಿದ್ದು ಎರಡು ವಿದ್ಯುತ್ ಕಂಬಗಳು ಧರಾಶಾಯಿ: ತಪ್ಪಿದ ಅಪಾಯ

ಉಪ್ಪಳ: ಗಾಳಿ ಮಳೆಗೆ ಮರ ಮುರಿದು ಬಿದ್ದು ಎರಡು ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಮಂಗಲ್ಪಾಡಿ ಪಂಚಾಯತ್‌ನ ೭ನೇ ವಾರ್ಡ್ ಪ್ರತಾಪನಗರ ಒಳರಸ್ತೆಯಲ್ಲಿ ಇಂದು ಮುಂಜಾನೆ ೨ ಗಂಟೆಗೆ ಘಟನೆ ನಡೆದಿದೆ. ಗಾಳಿ ಮರ ಹಾಗೂ ತೆಂಗಿನಮರ ವಿದ್ಯುತ್ ತಂತಿ ಮೇಲೆ ಮುರಿದು ಬಿದ್ದು ಎರಡು ವಿದ್ಯುತ್ ಕಂಬಗಳು ಹಾನಿಗೊಂಡಿದೆ. ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದುರಂತ ತಪ್ಪಿದೆ.  ಮರಬಿದ್ದಾಗ ತಂತಿ ಸಡಿಲಗೊಂಡು ರಸ್ತೆಯಲ್ಲಿ ಜೋತಾಡುತ್ತಿತ್ತು. ಇದು ಇಲ್ಲಿನ ಮನೆಯೊಂದರ  ವ್ಯಕ್ತಿಯ ಗಮನಕ್ಕೆ ಬಂದಿದ್ದು, ಯುವಕರ ಸಹಾಯದಿಂದ ಅಧಿಕಾರಿಗೆ ಕರೆ ಮಾಡಿ ವಿದ್ಯುತ್ ವಿಚ್ಛೇಧಿಸಲಾಗಿದೆ. ಈ ಸಂದರ್ಭದಲ್ಲಿ ವಾಹನ ಹಾಗೂ ಜನಸಂಚಾರ ಹಾದುಹೋಗುವ ಆತಂಕದಿಂದ ಸ್ಥಳೀಯರು ರಸ್ತೆಯಲ್ಲಿ ನಿಂತು ಜಾಗ್ರತೆ ವಹಿಸಿದರು. ನಿನ್ನೆ ರಾತ್ರಿ ಕೊಕ್ಕೆ ಚ್ಚಾಲ್, ಶಾಂತಿಗುಳಿ ಸಹಿತ  ವಿವಿಧ ಕಡೆಗಳಲ್ಲಿ ಮರಬಿದ್ದು ವಿದ್ಯುತ್ ಕಂಬ ಹಾನಿಗೊಂಡು ರಸ್ತೆತಡೆ ಉಂಟಾದ ಘಟನೆಯೂ ನಡೆದಿದೆ.

RELATED NEWS

You cannot copy contents of this page